ಗುರು ಪೀರಾ ಖಾದರಿ ಮತ್ತು ತತ್ವಪದಗಳು- ಲೇಖಕ ರಹಮತ್ ತೆರೀಕೆರೆ ಅವರು ಸಂಪಾದಿತ ಕೃತಿ. ಗುರು ಖಾದರ್ ಪೀರಾ ಎಂದೇ ಖ್ಯಾತಿಯ (1822-1896) ಈ ಕವಿಯ ಪೂರ್ಣ ಹೆಸರು-ಆಲಾ ಹಜರತ್ ಇಮಾಮ್ ಸೈಯದ್ ಅಬ್ದುಲ್ ಖಾದಿರ್ ಖಾದರಿ ಹಸನಿ ಉಲ್ ಹುಸೈನಿ ಹಾಷಮಿ . ಇವರ ಮೂಲ ವಂಶಸ್ಥರು ಇರಾಕ್ ರಾಜಧಾನಿ ಬಗ್ದಾದ್ ನವರು.
ಭಾರತಕ್ಕೆ ಬಂದ ಈ ವಂಶಸ್ಥರು ನಂತರ ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕಿನ ಸಾಲಗುಂದಾ ಗ್ರಾಮದಲ್ಲಿ ನೆಲೆಸಿತು. ಸೂಫಿಗಳ ಪ್ರೇಮತತ್ತ್ವವನ್ನು ಸಾರಿದವರು. ಗುರು ಖಾದರಿಪೀರಾ ಅವರು ಕನ್ನಡ, ಹಿಂದಿ, ಉರ್ದು, ಸಂಸ್ಕೃತ, ಪಾರ್ಸಿ ಮತ್ತು ಅರಬಿ ಹೀಗೆ ಬಹುಭಾಷೆ ಪರಿಣಿತರು. ಇಸ್ಲಾಂ ತತ್ತ್ವಜ್ಞಾನವನ್ನು ವ್ಯಾಖ್ಯಾನಿಸಿದರು. 25-07-1893 ರಂದು ಇಹಲೋಕ ತ್ಯಜಿಸಿದರು. ಗುರು ಖಾದರಿಪೀರಾ ಅವರು ವಚನಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿ ತತ್ವಗಳ ಮೂಲಕ ತತ್ವದರ್ಶನ ಮಾಡಿಸಿದ್ದು ಈ ಕೃತಿ. .
©2024 Book Brahma Private Limited.