ನಿಂಬರಗಿ ಮಹಾರಾಜರು ಮತ್ತು ಇತರರ ತತ್ಬವಪದಗಳು-ಈ ಕೃತಿಯು ತತ್ವಪದಗಳ ಸಂಗ್ರಹವಾಗಿದೆ. ಲೇಖಕಿ ಮೀನಾಕ್ಷಿ ಬಾಳಿ ಅವರು ಸಂಪಾದಿಸಿದ್ದಾರೆ. .ಧರ್ಮ ಬೋಧಕ ಸಾಧು-ಸಂತರ ಸಾಲಿಗೆ ಸೇರುವ ನಿಂಬರಗಿ ಮಹಾರಾಜರು (ಜನನ:1787-1882) ತತ್ವಪದ ರಚನೆಕಾರರು. ಇವರ ಮೂಲ ಹೆಸರು-ನಾರಾಯಣ (ನಾಗಪ್ಪ) ತಾಯಿಯ ತವರೂರು ಸೊಲ್ಲಾಪುರ. ತಂದೆ ಭೀಮಣ್ಣ. ಮನೆತನದ ಮೂಲಪುರುಷರು ಧಾರವಾಡ ಜಿಲ್ಲೆಯ ಕುಪೇನೂರ ಗ್ರಾಮದವರು, ನಂತರ ಈ ಮನೆತವು ಗದಗ ಬೆಟಗೇರಿಯಲ್ಲಿ ಕೆಲ ವರ್ಷ ಆನಂತರ ಪಂಢರಪುರದ ಬಳಿಯ ಮಂಗಳವೀಡಿನಲ್ಲಿ (ಮಂಗಳಪೇಟೆ) ವಾಸವಿತ್ತು. ಬಾವುಸಾಹೇಬ ಗುರುಲಿಂಗ ಮಹಾರಾಜರು ಎಂದೇ ಖ್ಯಾತಿ. ತಡವಾಗಿ ಮನೆಗೆ ಬಂದ ನಾರಾಯಣನನ್ನು ತಂದೆಯವರು ಬೈದರು. ಇದರಿಂದ ಮನೆನೊಂದು ನಿಂಬರಿಯಿಂದ ಪಂಡರಪುರಕ್ಕೆ ತೆರಳಿದ್ದರು. ಅಲ್ಲಿ ಒಬ್ಬ ಸಾಧು ಇವರನ್ನು ಕಂಡು ಸಾಧನೆ ಮಾಡು ಎಂದಿದ್ದಕ್ಕೆ ಪುನಃ ಅವರು ನಿಂಬರಗಿಗೆ ಬಂದರು. ಆದರೆ, 36 ರಿಂದ 67 ವಯಸ್ಸಿನವರೆಗೆ ಸಾಧನೆ ಮಾಡಿದರು. ಈ ಮಧ್ಯೆ, ಕುರಿ ಕಾಯ್ದರು. ಜವಳಿ ವ್ಯಾಪಾರ ಮಾಡಿದರು. ನೀಲಗಾರಿಕೆ ಉದ್ಯೋಗ ಕೈಗೊಂಡರು. ತಮ್ಮ ಕಾಯುಕದಲ್ಲಿ ತತ್ವನಿಷ್ಠೆ ಇಟ್ಟುಕೊಂಡಿದ್ದ ಪರಿಣಾಮ `ಜಗಭರಿತ ನೀನು, ಜಗದ ಒಳಗೆ ನಾನು. ಪ್ರಣವರೂಪ ನೀನು ಪಠಿಸಿ ನೋಡುವೆ ನಾನು ಎನುತನಂತೆ `ಗುರುಲಿಂಗ ಜಂಗಮ ನೀನೆ, ನಾನು ನೀನೇ ಇಹೆನು ಎಂಬ ಎತ್ತರಕ್ಕೇರಿದರು.
ಇವರ ಶಿಷ್ಯರ ಪೈಕಿ ಆಂಧ್ರದ ರಘುನಾಥ ಪ್ರಿಯರು, ದೇವನಾಗರೀಲಿಪಿಯಲ್ಲಿ ಮಹಾರಾಜರ ವಚನ-ಗ್ರಂಥವನ್ನು (1907) ಬರೆದರು. ಉಮದಿಯ ಶ್ರೀ ಭಾವುಸಾಹೇಬ ಮಹಾರಾಜರು, ಇವರ ವಚನಗಳನ್ನು ಸಂಗ್ರಹಿಸಿ ‘ಬೋಧಸುಧೆ’ ಗ್ರಂಥ ಬರೆದರು. 1882 ರಲ್ಲಿ ನಿಧನರಾದರು. ನಿಂಬರಗಿಯಲ್ಲಿ ಒಂದು ಸಮಾಧಿ ಇದ್ದರೆ ಇಂಚಗೇರಿಯಲ್ಲಿ ಮತ್ತೊಂದು ಸಮಾಧಿ ಸ್ಥಾಪಿಸಲಾಗಿದೆ. ಇವರ ತತ್ವಪದಗಳು ಜನಸಾಮಾನ್ಯರ ಬದುಕಿನ ಭೀತಿಗಳನ್ನು ಕಳೆಯುತ್ತಿದ್ದು, ಸಾಹಿತ್ಯಕವಾಗಿಯೂ ಪ್ರಮುಖವಾಗಿವೆ.
©2024 Book Brahma Private Limited.