ನೀರಲಕೇರಿ ಬಸವಲಿಂಗ ಶರಣರು ಹಾಗೂ ಇತರರ ತತ್ವಪದಗಳು

Author : ವಿಜಯಶ್ರೀ ಸಬರದ

Pages 542

₹ 90.00




Year of Publication: 2017
Published by: ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
Address: 08022773147
Phone: ಎರಡನೆಯ ಮಹಡಿ, ಚಾಲು

Synopsys

ಈ ಸಂಪುಟದಲ್ಲಿ ನೀರಲಕೇರಿ ಬಸವಲಿಂಗ ಶರಣರು, ಗೂಗಲ್ಲ ಪರಪ್ಪಯ್ಯ, ಅಂಕಲಗಿಮಠದ ನಿರುಪಾದಿ ಸ್ವಾಮಿಗಳು, ಗಬ್ಬೂರ ಹಂಪಣ್ಣ, ಘನಮಠದ ನಾಗಭೂಷಣ, ಅರವಲಿ ಬಿಜಲಿ, ಬಾಲರಾಮಪ್ಪ, ದೇವದುರ್ಗದ ಚೆನಮಲ್ಲ, ವೆಂಕಟಾಪುರದ ಖೇಮಣ್ಣ, ಅಯ್ಯಪ್ಪ ಪಂಥೋಜಿ, ತಾಳಪಲ್ಲಿ ವೆಂಕಯ್ಯ, ಬಳಗಾನೂರ ಮರಿಸ್ವಾಮಿ, ದೇವದುರ್ಗದ ಆದಿ ಅಮಾತೆಪ್ಪ, ಗಬ್ಬೂರ ಮಾರ್ತಾಂಡಪ್ಪ, ಮಾಣಿಕಪ್ಪ, ಕರಿಗುಡ್ಡ ಬಸಣ್ಣ, ರಾಜಯೋಗಿ ಬಸನಗೌಡ ಬುರಾನಪೂರ ಅವರು ರಚಿಸಿದ ತತ್ವಪದಗಳನ್ನು ಸಂಕಲಿಸಲಾಗಿದೆ. 

ಅನುಬಂಧದಲ್ಲಿ ತತ್ವಪದಕಾರರ ಅಂಕಿತಗಳು, ಅಕಾರಾದಿ ತತ್ವಪದಗಳು, ಪ್ರಾದೇಶಿಕ ಪದಗಳ ಅರ್ಥ ಮತ್ತು ಪೂರಕ ಗ್ರಂಥಸೂಚಿ ನೀಡಲಾಗಿದೆ.

About the Author

ವಿಜಯಶ್ರೀ ಸಬರದ
(01 February 1957)

ಮಹಿಳೆಯರ ಶೋಷಣೆ ಮತ್ತು ಸ್ತ್ರೀಯರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ತಮ್ಮ ಖಚಿತ ಅಭಿಪ್ರಾಯ ಮಂಡಿಸುವ ಲೇಖಕಿ ವಿಜಯಶ್ರೀ ಸಬರದ. ಅವರು ಜನಿಸಿದ್ದು 1957ರ ಫೆಬ್ರುವಿರ 1ರಂದು. ತಂದೆ ಗುಣವಂತರಾವ ಪಾಟೀಲ. ತಾಯಿ ಸಂಗಮ್ಮ. ಪ್ರಾರಂಭಿಕ ಶಿಕ್ಷಣ ಹಾಗೂ ಕಾಲೇಜು ಪದವಿ ಶಿಕ್ಷಣವನ್ನು ಬೀದರ್‌ನಲ್ಲಿ ಪಡೆದ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು. ’ಅನುಪಮಾ ನಿರಂಜನರ ಕಾದಂಬರಿಗಳು; ಒಂದು ಅಧ್ಯಯನ” ಎಂಬ ಪ್ರಬಂಧ ಮಂಡಿಸಿ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಪಡೆದ ಪಿಎಚ್‌.ಡಿ. ಪದವಿ ಪಡೆದರು. ಬೀದರ್‌ನ ಅಕ್ಕ ಮಹಾದೇವಿ ಮಹಿಳಾ ವಿದ್ಯಾಲಯದಲ್ಲಿ ಉಪನ್ಯಾಸಕಿಯಾಗಿ ವೃತ್ತಿ ಜೀವನ ಆರಂಭಿಸಿದ ಅವರು ನಂತರ ...

READ MORE

Related Books