ತುರುವೇಕೆರೆ ಕಲ್ಲೂರಿಗೆ ಬಂದು ನೆಲೆಸಿ, ಅಲ್ಲಿಯೇ ಸಮಾಧಿ ಹೊಂದಿದ ರುದ್ರಮುನಿ ಸ್ವಾಮಿಗಳು, ಸ್ತ್ರೋತ್ರ, ಅಂಬಾ ಸ್ತುತಿಗಳನ್ನು ಸಾಧಕರು ಹಾಡಿ ಜನಪ್ರಿಯಗೊಳಿಸಿದ್ದಾರೆ. ಅವಧೂತ ಸಂಪ್ರದಾಯದ ರುದ್ರಮುನಿಸ್ವಾಮಿಗಳು ನೇಕಾರ ಕುಲದವರು. ತಮ್ಮ ಕುಲದೇವತೆ ಬನಶಂಕರಿಯ ಉಪಾಸಕರಾದ ಅವರು ಬಾದಾಮಿಯ ಬನಶಂಕರಿ, ಮಾಗಡಿ ರಂಗ, ತರೀಕೆರೆಯ ಹನುಮ ಮುಂತಾದ ದೇವರುಗಳ ಮಂಗಳಾರತಿ ಪದಗಳನ್ನು ರಚಿಸಿದ್ದಾರೆ.
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಚುಂಗನಹಳ್ಳಿಯವರಾದ ಶಿವಪ್ಪ ಅವಧೂತ ಸಂಪ್ರದಾಯದ ಪದಕಾರ. ಸಿದ್ಧರಾಮ, ಶಿವಸಿದ್ಧರಾಮ, ಸಿದ್ಧಲಿಂಗೇಶ, ಚುಂಗನಪುರದ ಮಲ್ಲಿಕಾರ್ಜುನ, ವಡೇರಹಳ್ಳಿ ಗುರುಶಾಂತ ಮುಂತಾದ ಶರಣರನ್ನು ಮತ್ತು ದೈವವಿಶೇಷವನ್ನು ತಮ್ಮ ತತ್ವಪದಗಳ ಅಂಕಿತವಾಗಿಟ್ಟುಕೊಂಡಿದ್ದಾರೆ. ಶಿವಪ್ಪನವರ ಗದ್ದುಗೆಯು ಶೆಟ್ಟಿಕೆರೆಯಲ್ಲಿದೆ.
ಈ ಇಬ್ಬರು ತತ್ವಪದಕಾರರ ಹಾಡುಗಳನ್ನು ಈ ಸಂಪುಟದಲ್ಲಿ ಸಂಕಲಿಸಲಾಗಿದೆ.
©2024 Book Brahma Private Limited.