ಕೋಲಾರ ಜಿಲ್ಲೆಯ ಚಿಂತಾಮಣಿಯಲ್ಲಿ 1730ರಲ್ಲಿ ಜನಿಸಿದ ನಾರೇಯಣಪ್ಪ ಹೆಗಲಮೇಲೆ ಬಳೆಯ ಮಲಾರ ಹೊತ್ತುಕೊಂಡು ಬದುಕು ನಡೆಸುತ್ತಿದ್ದರು. ವ್ಯಾಪಾರಕ್ಕೆಂದು ಚಿತ್ತೂರಿನ ಮುಗಳಿವೆಂಕಟಗಿರಿ ಕಣಿವೆಯಲ್ಲಿ ವಿಶ್ರಮಿಸುತ್ತಿರುವಾಗ ’ಪರದೇಸಿಸ್ವಾಮಿ’ಗಳಿಂದ ಅನುಗ್ರಹಕ್ಕೆ ಪಾತ್ರರಾದರು. 1884ರಲ್ಲಿ ಸಮಾಧಿಯಾದ ನಾರೇಯಣಪ್ಪ ಅವರು ’ವೇದಾಂತ ಸಾರಾವಳಿ’ ಮತ್ತು ಅಮರನಾರೇಯಣ ಶತಕ’ ಕೃತಿಗಳನ್ನು ರಚಿಸಿದ್ದಾರೆ. ಬಹುಪಾಲು ನಾರೇಯಣಪ್ಪನವರ ಸಾಹಿತ್ಯ ತೆಲುಗಿನಲ್ಲಿಯೇ ಇದೆ. ’ವೇದಾಂತ ಸಾರಾವಳಿ’ಯ ’ಸುಜ್ಞಾನ ತತ್ವಮುಲು’ ಎಂಬ ವಿಭಾಗದಲ್ಲಿ ಹದಿನೇಳು ತತ್ವಗಳು ಮಾತ್ರ ಕನ್ನಡದಲ್ಲಿವೆ.
ನಾರೇಯಣಪ್ಪ ಅವರಲ್ಲದೇ ರಾಮಾವಧೂತರು, ಮಲ್ಲಾರ್‍ಯರ ಸಂತತಿಯವರಾದ ಕೊಂಡಾರ್‍ಯರು ಮತ್ತು ನಾಗಾರ್‍ಯರು ಬರೆದ ತತ್ವಪದಗಳು, ಗಗನಾನಂದಾರ್ಯರು ಹಾಗೂ ಅನಾಮಿಕ ತತ್ವಪದಕಾರರು ರಚಿಸಿದ ಪದಗಳನ್ನು ಈ ಸಂಕಲನ ಒಳಗೊಂಡಿದೆ.
©2024 Book Brahma Private Limited.