ನಿಜಗುಣ ಶಿವಯೋಗಿಗಳ ಪರಂಪರೆಯಲ್ಲಿ ಬೆಳೆದುಬಂದ ತತ್ವಪದಕಾರರಾದ ಕೆಸ್ತೂರದೇವ (1700), ಹಾಗಲವಾಡಿ ಮುದ್ವೀರಸ್ವಾಮಿ (1700-1738) ಮತ್ತು ಸೋಮೇಕಟ್ಟೆ ಚನ್ನವೀರಸ್ವಾಮಿಯವರ ತತ್ವಪದಗಳನ್ನು ಈ ಸಂಪುಟ ಒಳಗೊಂಡಿದೆ.
ತೋಂಟದ ಸಿದ್ಧಲಿಂಗ ಯತಿಗಳ ಸಂಪ್ರದಾಯಕ್ಕೆ ಸೇರಿದ ಕೆಸ್ತೂರದೇವರ ವೈಯಕ್ತಿಕ ವಿವರ ಲಭ್ಯವಿಲ್ಲ. ಗುರುಸಿದ್ಧಲಿಂಗ’ ಎಂಬುದು ಅವರ ಅಂಕಿತನಾಮ,
ತುಮಕೂರು ಜಿಲ್ಲೆಯ ಹಾಗಲವಾಡಿ ಸಂಸ್ಥಾನದ ಪಾಳೆಯಗಾರರ ಧರ್ಮಗುರುಗಳಾಗಿದ್ದ ಮುದ್ವೀರಸ್ವಾಮಿ ಅವರು ರಚಿಸಿದ ’ಶಿವತತ್ವ ಸುಜ್ಞಾನ ದೀಪಿಕೆ’ ಮತ್ತು 107 ಪದಗಳು ಲಭ್ಯವಿವೆ. ಇವರೂ ಸಹ ತೋಂಟದ ಸಿದ್ದಲಿಂಗ ಯತಿಗಳ ಶಿಷ್ಯ ಪರಂಪರೆಗೆ ಸೇರಿದವರು.
ಸೋಮೇಕಟ್ಟೆ ಚೆನ್ನವೀರಸ್ವಾಮಿಗಳೂ ಸಹ ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನ ನೊಣವಿನಕೆರೆಯ ಸೋಮೆಕಟ್ಟೆಮಠ ಪರಂಪರೆಗೆ ಸೇರಿದವರು. ವಿರಾಗಿಯಾಗಿದ್ದ ಅವರ ಅಂಕಿತನಾಮ ಗುರುಚನ್ನಬಸವ. ಅವರು24 ಕೃತಿಗಳನ್ನು ರಚಿಸಿದ್ದಾರೆ ಎಂದು ತಿಳಿದು ಬರುತ್ತದೆ. ಚನ್ನವೀರಸ್ವಾಮಿಗಳ ಕುರಿತ ಹೆಚ್ಚಿನ ವಿವರಗಳು ಲಭ್ಯವಿಲ್ಲ.
©2025 Book Brahma Private Limited.