ಸಮಗ್ರ ತತ್ವಪದಗಳ ಜನಪ್ರಿಯ ಸಾಹಿತ್ಯ ಮಾಲೆಯ ಮೊದಲನೆಯ ಸಂಪುಟವನ್ನು ರಹಮತ್ ತರೀಕೆರೆ ಮತ್ತು ಅರುಣ್ ಜೋಳದಕೂಡ್ಲಿಗಿ ಸಂಪಾದಿಸಿದ್ದಾರೆ. ತತ್ವಪದ ಪ್ರವೇಶಿಕೆ’ಯಲ್ಲಿ ಇಪ್ಪತ್ತು ಲೇಖನಗಳಿವೆ. ಈ ಲೇಖನಗಳನ್ನು ತತ್ವ-ದರ್ಶನ, ಸಾಹಿತ್ಯ-ಚರಿತ್ರೆ, ಸಮಾಜ-ಧರ್ಮ, ಪದ-ಪದಕಾರ ಎಂಬ ನಾಲ್ಕು ಭಾಗಗಳಲ್ಲಿ ವಿಂಗಡಿಸಲಾಗಿದೆ. ಮೊದಲ ಭಾಗದಲ್ಲಿ ಲಿಂಗರಾಜು ಅವರ ’ಅನಾದಿಯ ಅನುಭಾವದ ಸೆಲೆ’, ನಟರಾಜ ಬೂದಾಳು ಅವರ ’ಶರಣರ ತತ್ವಪದಕಾರರ ತಾತ್ವಿಕ ನೆಲೆಗಳು’, ಜಿ. ರಾಮಕೃಷ್ಣ ಅವರ ’ಸಂತರ ಚಿಂತನೆ ಮತ್ತು ಸಂಘರ್ಷದ ನೆಲೆಗಳು’, ಎಂ.ಜಿ. ರಾನಡೆ ಅವರ ’ಕನ್ನಡ ಸಂತರ ಪರಮಾರ್ಥ ಪಥದಲ್ಲಿ ಗುರುಶಿಷ್ಯರ ಸಂಬಂಧ’ ಲೇಖನಗಳಿವೆ.
ಎರಡನೆಯ ಸಾಹಿತ್ಯ-ಚರಿತ್ರೆ ಭಾಗದಲ್ಲಿ ಶಾಂತರಸ ಅವರ ’ತತ್ವಪದಕಾರರನ್ನು ಗುರುತಿಸದೆ ಹೋದರೆ...’, ಓ.ಎಲ್. ನಾಗಭೂಷಣಸ್ವಾಮಿ ಅವರ ’ತತ್ವಪದಗಳು ಹಾಗೂ ಹೊಸಗನ್ನಡದ ಅರುಣೋದಯ’, ಕಿ.ರಂ. ನಾಗರಾಜ ಅವರ ’ಹದಿನೇಳು ಹದಿನೆಂಟನೆಯ ಶತಮಾನದ ಅನುಭಾವ ಸಾಹಿತ್ಯ’, ಬಿ. ಶಿವಮೂರ್ತಿಶಾಸ್ತ್ರಿಗಳ ’ಕನ್ನಡದಲ್ಲಿ ಹಾಡುಗಬ್ಬಗಳು’, ಬಸವರಾಜ ಮಲಶೆಟ್ಟಿ ಅವರ ’ಸ್ವರವಚನ ಸಾಹಿತ್ಯ- ಒಂದು ಮರುವಿಚಾರ’, ಜಿ.ವಿ. ಆನಂದಮೂರ್ತಿ ಅವರ ’ತತ್ವಪದಗಳು: ನೆಲದ ಮರೆಯ ನಿಧಾನ’, ಅಮರೇಶ ನುಗಡೋಣಿ ಅವರ ’ತತ್ವಪದ ಸಾಹಿತ್ಯ ಚಳವಳಿ: ಒಂದು ಚರ್ಚೆ’, ವೀರಣ್ಣ ದಂಡೆ ಅವರ ’ಕಲ್ಯಾಣ ಕರ್ನಾಟಕದ ತತ್ವಪದಕಾರರು’ ಲೇಖನಗಳಿವೆ.
ಮೂರನೆಯ ಸಮಾಜ-ಧರ್ಮ ಭಾಗದಲ್ಲಿ ಎಂ.ಎಂ. ಕಲಬುರ್ಗಿ ಅವರ ’ವೀರಶೈವ ಸ್ವರವಚನ ಸಾಹಿತ್ಯ’, ಎಚ್.ಎಸ್. ಶಿವಪ್ರಕಾಶ್ ಅವರ ’ಎಲ್ಲಾ ಜಾತಿಯ ಮರಗಳ ಕಾಡು: ತತ್ವಪದಕಾರರು’, ಲಕ್ಷ್ಮೀಪತಿ ಕೋಲಾರ ಅವರ ’ತತ್ವಪದಕಾರರ ನಿರ್ವಸಾಹತೀಕರಣ ಚಿಂತನೆ, ರಹಮತ್ ತರೀಕೆರೆ ಅವರ ’ಮುಸ್ಲಿಂ ತತ್ವಪದಕಾರರು: ಹೀಗೆನ್ನುವುದು ಯಾಕೆ ಕಷ್ಟ’ ಎಂಬ ಲೇಖನಗಳಿವೆ.
ಪದ-ಪದಕಾರ ಎಂಬ ನಾಲ್ಕನೆಯ ಭಾಗದಲ್ಲಿ ದ.ರಾ. ಬೇಂದ್ರೆಯವರ ’ನಿಜಗುಣದ ಶಿವಯೋಗ’, ಚೆನ್ನವೀರ ಕಣವಿ ಅವರ ’ಮುಪ್ಪಿನ ಷಡಕ್ಷರಿಯ ಮುಪ್ಪರಿಯದ ಹಾಡುಗಳು’, ರಾ.ಯ. ಧಾರವಾಡಕರ ಅವರ ’ಗುರುಲಿಂಗ ಜಂಗಮ ಮಹಾರಾಜರು’, ಆರ್. ನರಸಿಂಹಾಚಾರ್ ಅವರ ’ಚಿದಾನಂದಾವಧೂತ’ ಬರೆಹಗಳಿವೆ.
ಅನುಬಂಧದಲ್ಲಿ ಅರುಣ್ ಜೋಳದಕೂಡ್ಲಿಗಿ ಸಿದ್ಧಪಡಿಸಿದ ತತ್ವಪದ ಆಕರಸೂಚಿ: ಕೆಲವು ಟಿಪ್ಪಣಿಗಳು ಬರೆಹ ಇದೆ. ಲೇಖನಸೂಚಿ ಮತ್ತು ಲೇಖಕರ ಮಾಹಿತಿ ನೀಡಲಾಗಿದೆ.
©2024 Book Brahma Private Limited.