ಸ್ಪಧಾð ಕನ್ನಡ-ಡಾ. ಶರಣಬಸಪ್ಪ ವಡ್ಡನಕೇರಿ ಅವರು ಶೈಕ್ಷಣಿಕ ಪರೀಕ್ಷಾರ್ಥಿಗಳಿಗಾಗಿ ರಚಿಸಿದ ಕೃತಿ. ಕನ್ನಡ ನಾಡು ಮತ್ತು ಜನ ಅವರಾಡುವ ಭಾಷೆಯನ್ನು ಕನ್ನಡವೆಂತಲೂ ಅವರು ನೆಲೆ ಸಿರುವ ಪ್ರದೇಶವನ್ನು ಕರ್ನಾಟಕ ವೆಂತಲೂ, ಕನ್ನಡಿಗರೆಂದು ನಾವು ಕರೆಯುತ್ತೇವೆ. ಜೀವಂತವಾದ ಕನ್ನಡ ಭಾಷೆಯ ಸಾವಿರಾರು ವರ್ಷಗಳ ಇತಿಹಾಸವಿದೆ. ಈ ಇತಿಹಾಸದ ಕಾಲಘಟ್ಟದಲ್ಲಿ ಹಲವಾರು ಕವಿವರ್ಯರು ಭಾಷೆಯನ್ನು ಕಟ್ಟುವ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಭಾಷೆಯನ್ನು ಶ್ರೀಮಂತಗೊಳಿಸಿದ್ದಾರೆ. ಕನ್ನಡ ಭಾಷೆಯನ್ನು ಮತ್ತು ಕನ್ನಡನಾಡನ್ನು ನಾಗಾಲೋಟದಲ್ಲಿ ಕೊಂಡೊಯ್ಯಬೇಕಾದರೆ ಕನ್ನಡವನ್ನು ಬೆಳೆಸಬೇಕಾದ ಗುರುತರವಾದ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಕನ್ನಡ ಭಾಷೆಯ ಹರಿವು ಅತ್ಯಂತ ವಿಶಾಲ. ಸ್ಪರ್ಧಾತ್ಮಕ ಪರೀಕ್ಷೆಗಳ ಪಠ್ಯಕ್ರಮಕ್ಕನುಸಾರವಾಗಿ ಈ ಕೃತಿ ರಚಿಸಲಾಗಿದೆ. ಕೃತಿಯಲ್ಲಿ ಕನ್ನಡ ಭಾಷೆ,ವ್ಯಾಕರಣ, ಸಾಹಿತ್ಯ ಚರಿತ್ರೆ, ಸಾಮಾನ್ಯ ಕನ್ನಡ, ಕನ್ನಡ ಕವಿಗಳ ಪರಿಚಯ, ಸಾಮಾನ್ಯ ಜ್ಞಾನ ಹಾಗೂ ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಮಾಹಿತಿ ಇದೆ.
©2024 Book Brahma Private Limited.