ಲೇಖಕರಾದ ಡಾ. ಕಲ್ಯಾಣರಾವ ಜಿ. ಪಾಟೀಲ ಮತ್ತು ಲಕ್ಷ್ಮೀಕಾಂತ ಸಿ. ಪಂಚಾಳ. ‘ಸಮಗ್ರ ಕನ್ನಡ : ವಸ್ತುನಿಷ್ಠ ಜ್ಞಾನಕೋಶ’ ಎಂದೇ ಕರೆದುಕೊಂಡಿದ್ದಾರೆ. ಈ ಕೃತಿಯು 2011ರಲ್ಲಿ ಮೊದಲ ಮುದ್ರಣ ಕಂಡಿತ್ತು. ಸುಮಾರು 20 ವರ್ಷಗಳ ನೆಟ್, ಜೆ.ಆರ್.ಎಫ್. ಹಾಗೂ ವಿವಿಧ ಕನ್ನಡ ಶಿಕ್ಷಕರ ಹುದ್ದಗಳಿಗೆ ನಡೆದ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನಾವಳಿಗಳನ್ನು ಎದುರಿಗೆ ಇಟ್ಟುಕೊಂಡು ತಯಾರಿಸಿದ ಒಂದು ಮಾಹಿತಿ ಕೋಶ ಇದಾಗಿದೆ” ಎಂದು ಇದಕ್ಕೆ ಮುನ್ನುಡಿ ಬರೆದಿರುವ ಡಾ. ವೀರಣ್ಣ ದಂಡೆಯವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಾಹಿತ್ಯ ಚರಿತ್ರೆ, ಭಾರತೀಯ ಕಾವ್ಯ ಮೀಮಾಂಸೆ, ಪಾಶ್ಚಾತ್ಯ ಕಾವ್ಯ ಮೀಮಾಂಸೆ, ಸಾಹಿತ್ಯ ವಿಮರ್ಶೆ, ಭಾಷಾ ವಿಜ್ಞಾನ, ವ್ಯಾಕರಣ, ಛಂದಸ್ಸು ಹೀಗೆ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ವ್ಯಾಪಕ ಮಾಹಿತಿಗಳನ್ನುನೀಡಲಾಗಿದೆ. 1991 ರಿಂದ 2011 ರವರೆಗಿನ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಕನ್ನಡ ಪ್ರಶ್ನೋತ್ತರ ಮಾಲಿಕೆಗಳಿವೆ. ಮೊರಾರ್ಜಿ ದೇಸಾಯಿ ಪ್ರೌಢ ಶಾಲೆ, ಸರಕಾರಿ ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ನೆಟ್, ಕೆ.ಎ.ಎಸ್. ಹುದ್ದೆಗಳಿಗೆ ಇತ್ತೀಚಿನ ವರ್ಷಗಳಲ್ಲಿ ನಡೆದ ಪರೀಕ್ಷಾ ಪ್ರಶ್ನೆಪತ್ರಿಕೆಗಳ ಮಾದರಿಗಳಿವೆ. ಹಿಂದುಳಿದ ವಿಭಾಗದಲ್ಲಿ ಸ್ಪರ್ಧಾತ್ಮಕವಾಗಿ ಯುವಕರನ್ನು ಜಾಗೃತಿಗೊಳಿಸುವ ನಿಟ್ಟಿನಲ್ಲಿ ಈ ಕೃತಿಯು ಒಂದು ಮಾದರಿ ಆಕರ ಗ್ರಂಥವಾಗಿದೆ. ಪ್ರೌಢಶಾಲೆಯಿಂದ ಪಿಯುಸಿ ಹಾಗೂ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಬೋಧಕರಾಗ ಬಯಸುವವರಿಗೆ ಈ ಕೃತಿ ಆಕರ ಗ್ರಂಥ.
©2024 Book Brahma Private Limited.