ಲೇಖಕ ರಂಗರಾಜ್ ಚಕ್ರವರ್ತಿ ಅವರ ಕೃತಿ-ಕಠಿಣ ಪ್ರಶ್ನೆಗಳು ಸ್ಮಾರ್ಟ್ ಉತ್ತರಗಳು. ಉದ್ಯೋಗ-ಸಂದರ್ಶನಗಳನ್ನು ಎದುರಿಸುವುದು ಹೇಗೆ? ಎಂಬುದು ಈ ಕೃತಿಯ ಉಪಶೀರ್ಷಿಕೆ. ಸ್ಪರ್ಧಾತ್ಮಕ ಚಟುವಟಿಕೆಗಳು ಹೆಚ್ಚುತ್ತಿರುವ ಈ ಕಾಲದಲ್ಲಿ ಪ್ರತಿ ವಲಯ ಪ್ರವೇಶವು ಕಷ್ಟವಾಗುತ್ತಿದೆ. ಸ್ಪರ್ಧೆ ಎದುರಿಸಿಯೇ ಉದ್ಯೋಗ ಪಡೆಯಬೇಕು. ಸ್ಪರ್ಧೆ ಎದುರಿಸಿಯೇ ಶಾಲೆ ಪ್ರವೇಶಿಸ ಬೇಕು. ಸಂದರ್ಶನದ ಮೂಲಕವೇ ಸ್ಥಾನ ಪಡೆಯಬೇಕು. ಹೀಗೆ ಸ್ಪರ್ಧಾತ್ಮಕ ಜಗತ್ತು, ಸ್ಪರ್ಧಾಳುಗಳಿಗೆ ಮಾತ್ರ ಮಣಿಯುತ್ತಿದೆ. ಸ್ಪರ್ಧೆಗೆ ಹಿಂಜರಿದವರು ಎಲ್ಲಿಯೂ ಸ್ಥಾನ ಪಡೆಯದೇ ಬದುಕಿನ ನೆಲೆ ಕಾಣುತ್ತಿಲ್ಲ. ಇಂತಹ ಸ್ಥಿತಿಯಲ್ಲಿ, ಕಠಿಣ ಪ್ರಶ್ನೆಗಳು ಸ್ಮಾರ್ಟ್ ಉತ್ತರಗಳು ಇಂತಹ ಕೃತಿಯು ಸ್ಪರ್ಧಾಳುಗಳನ್ನು ಸ್ಪರ್ಧೆ ಎದುರಿಸುವ ಮನೋಸ್ಥೈರ್ಯ ನೀಡುತ್ತದೆ. .
©2025 Book Brahma Private Limited.