ಕೋ. ಚೆನ್ನಬಸಪ್ಪ ಅವರು ರಚಿಸಿದ ‘ಬೇಡಿ ಕಳಚಿತ ದೇಶ ಒಡೆಯಿತು’ ಕೃತಿಯ ಕುರಿತು ಕೋ.ಚೆ. ಅವರೊಂದಿಗೆ ಲೇಖಕರಾದ ಲಕ್ಷ್ಮಣ ಕೊಡಸೆ, ಹರಿಹರಪ್ರಿಯ, ಕುಲಶೇಖರಿ ಹಾಗೂ ಶ್ರೀನಿವಾಸಮೂರ್ತಿ ಅವರು ಸಂದರ್ಶನ ಮಾಡಿದ ಹಾಗೂ ಲೇಖಕ ಎಚ್.ಎಸ್. ಗೋಪಾಲರಾವ್ ಅವರು ಸಮನ್ವಯಕಾರರಾಗಿ ನಿರ್ವಹಿಸಿದ ಕೃತಿ-ಕೃತಿ ಪರಿಚಯ, ಸಂದರ್ಶನದಿಂದ. ದೇಶ ಸ್ವಾತಂತ್ಯ್ರ ಪಡೆಯಿತು ನಿಜ. ಆದರೆ, ದೇಶ ಒಡೆದು ಹೋಯಿತು ಎಂಬ ಐತಿಹಾಸಿಕ ಘಟನೆಗಳ ಮೇಲೆ ಕ್ಷಕಿರಣ ಬೀರುವ ಬರಹಗಳನ್ನು ಒಳಗೊಂಡಿದ್ದರ ಕೃತಿಯ ಬಗ್ಗೆ ಹಾಗೂ ಈ ಕೃತಿ ಲೇಖಕರ ವಿಚಾರಗಳನ್ನು ಕಟ್ಟಿಕೊಡಲಾಗಿದೆ. ದೇಶದ ವಿಭಜನೆಗೆ ಕಾರಣ, ಅದರ ಪರಿಣಾಮಗಳ ವಿಶ್ಲೇಷಣಾತ್ಮಕ ಮಾಹಿತಿಯನ್ನು ಸಂದರ್ಶನದ ಮೂಲಕ ಪಡೆಯಲಾಗಿದೆ. ಬೇಡಿ ಕಳಚಿತು ದೇಶ ಒಡೆಯಿತು ಕೃತಿ ಹಾಗೂ ಅದಕ್ಕಿಂತಲೂ ತೀಕ್ಷ್ಣವಾಗಿ ಲೇಖಕರು ಕೃತಿಯಲ್ಲಿ ಪ್ರತಿಕ್ರಿಯಿಸಿದ್ದು ಈ ಕೃತಿಯ ವಿಶೇಷ.
©2024 Book Brahma Private Limited.