ಲೇಖಕರಾದ ಡಾ. ಕಲ್ಯಾಣರಾವ್ ಪಾಟೀಲ ಹಾಗೂ ಲಕ್ಷ್ಮಿಕಾಂತ ಪಂಚಾಳ ಅವರು ಜಂಟಿಯಾಗಿ ಕನ್ನಡ ಕೈಗನ್ನಡಿ ಕೃತಿ ರಚಿಸಿದ್ದು, ಪದವಿಪೂರ್ವ ಕಾಲೇಜು ಕನ್ನಡ ಉಪನ್ಯಾಸಕರ ನೇಮಕಾತಿಗಾಗಿ ಸಿದ್ಧಪಡಿಸಿದ ಜ್ಞಾನದ ಕಣಜವಾಗಿದೆ. ಕನ್ನಡ ಸಾಹಿತ್ಯ ಚರಿತ್ರೆ ಮತ್ತು ಅದರ ಕಾಲಾನುಕ್ರಮದ ಘಟ್ಟಗಳು, ಕಾವ್ಯ ಮಿಮಾಂಸೆ, ಸಾಹಿತ್ಯ ವಿಮರ್ಶೆ, ಕನ್ನಡ ಸಾಹಿತ್ಯದ ರೂಪಗಳಾದ ಚಂಪೂ, ವಚನ, ರಗಳೆ, ಷಟ್ಪದಿ, ಸಾಂಗತ್ಯ, ಕೀರ್ತನ, ತ್ರಿಪದಿ, ಕಾವ್ಯ, ಸಣ್ಣಕಥೆ, ಕಾದಂಬರಿ, ನಾಟಕ, ಆತ್ಮಕಥೆ, ಪ್ರವಾಸಕಥೆ, ಸಂಶೋಧನೆ ಹೀಗೆ ಸಮಗ್ರ ಕನ್ನಡ ಸಾಹಿತ್ಯದ ವಿವಿಧ ಮಜಲುಗಳನ್ನು ಮನದಟ್ಟು ಮಾಡಿಕೊಡುವಲ್ಲಿ ವಸ್ತುನಿಷ್ಠ ಪ್ರಶ್ನೋತ್ತರ ಮಾಲಿಕೆಯು ಉಪಯುಕ್ತವಾಗಿದೆ. ವಚನಕಾರರ ಅಂಕಿತಗಳು, ಕನ್ನಡ ಸಣ್ಣ ಕಥೆಗಳು, ಅಕ್ಷರ ಹೊಸ ಕಾವ್ಯ, ಕನ್ನಡದ ಮೊದಲುಗಳು, ಕೀರ್ತನಕಾರರ ಅಂಕಿತಗಳು, ಚಂಪೂ ಕವಿಗಳು, ಷಟ್ಪದಿ ಕಾವ್ಯಗಳು, ಆಧುನಿಕ ಕವಿ ಕಾವ್ಯಗಳು, ಮಹಾಕಾವ್ಯಗಳು, ಕಥಾ ಸಂಕಲನಗಳು, ನಾಟಕಕಾರರು, ಪ್ರಬಂಧ ಕೃತಿಗಳು, ವಿಮರ್ಶಾ ಕೃತಿಗಳು, ಜೀವನ ಚರಿತ್ರೆಯ ಕೃತಿಗಳು, ಪ್ರವಾಸ ಕಥೆಗಳು, ಅಭಿನಂಧನ ಗ್ರಂಥಗಳು, ಭಾಷಾವಿಜ್ಞಾನದ ವಾದಗಳು, ಛಂದಸ್ಸಿನ ಗ್ರಂಥಗಳು, ಕನ್ನಡ ನಿಘಂಟುಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ರಾಷ್ಟ್ರಕವಿಗಳು, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದವರು ಹೀಗೆ ಹತ್ತು ಹಲವು ವಿಷಯಗಳ ಸಮಗ್ರ ಮಾಹಿತಿಯನ್ನು ವ್ಯವಸ್ಥಿತವಾಗಿ ಸಂಗ್ರಹಿಸಿಕೊಡಲಾಗಿದೆ. ಪದವಿಪೂರ್ವ ಕಾಲೇಜು ಕನ್ನಡ ಉಪನ್ಯಾಸಕರ ನೇಮಕಾತಿಗಾಗಿ ನಡೆದ ಇದುವರೆಗಿನ ಪ್ರಶ್ನೆಪತ್ರಿಕೆಗಳ ಉತ್ತರಸಹಿತ ವಿವರಣೆಯನ್ನು ಕೊಟ್ಟಿರುವುದು ವಿಶೇಷ.
©2024 Book Brahma Private Limited.