ತುಮಕೂರು ಜಿಲ್ಲೆಯ ತಿಪಟೂರು, ಚಿಕ್ಕನಾಯಕನಹಳ್ಳಿ, ತುರುವೇಕೆರೆ, ಪಾವಗಡ ಮತ್ತು ಕೊರಟಗೆರೆ ತಾಲ್ಲೂಕಿನಲ್ಲಿ ಸಂಗ್ರಹಿಸಲಾದ ತತ್ವಪದಗಳು ಈ ಸಂಪುಟದಲ್ಲಿವೆ.
ಮೈಸೂರಿನವನಾದ ಶಿವಾನಂದ ಸುಬ್ರಹ್ಮಣ್ಯ ಹತ್ತೊಂಬತ್ತನೆಯ ಶತಮಾನದಲ್ಲಿ ಜೀವಿಸಿದ್ದ. ಶಿವಾನಂದ ಅವರು ’ವೇದಾಂತ ದೀಪಿಕೆ’ ಎಂಬ ಇನ್ನೊಂದು ಗ್ರಂಥವನ್ನೂ ರಚಿಸಿದ್ದ. ಶಾಂಕರ ಅದ್ವೈತಿಯಾದ ಶಿವಾನಂದ ಶಂಕರಾನಂದ ಶಿವಯೋಗಿಯಂತೆ ಅದ್ವೈತ ಪ್ರಸ್ಥಾನದವನು.
ಬಾಗೇಶಪುರದ ಶಿವಪ್ಪ ಅವರು ಜಮಖಂಡಿಯಿಂದ ಬಂದು ನೆಲೆಸಿದವರು. ಹುಚ್ಚೇಶ್ವರ ನಾಟಕಮಂಡಳಿಯಲ್ಲಿ ಸಂಗೀತ ಹೇಳಿಕೊಡುತ್ತಿದ್ದ ಶಿವಪ್ಪನವರ ಹಸ್ತಪ್ತತಿಯಲ್ಲಿ ಸಂಗೀತ ಮತ್ತು ಭಾಷಾಶುದ್ಧತೆಗಳೆರಡೂ ಮೇಳೈಸಿದಂತಿವೆ.
ಹರಿಹರಗುರು ಎಂಬ ಅಂಕಿತ ನಾಮದಲ್ಲಿ ಬರೆಯುತ್ತಿದ್ದವರು ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಯ ಅಂಚಿನ ಧರ್ಮಪುರದಲ್ಲಿದ್ದ ಹನುಮಂತರಾಯ. ಅವರಿಗೆ ಗರುಡಚೇಡು ಹನುಮಂತರಾಯ ಎಂಬ ಮತ್ತೊಂದು ಹೆಸರಿತ್ತು. ಅವರು ನಾಟಕದ ಭಾಗವತರಾಗಿದ್ದರು.
ಮಲ್ಲಿಕಾರ್ಜುನ ಶಿವಾನಂದರ ತತ್ವಪದಗಳು ಪಾವಗಡ ತಾಲ್ಲೂಕಿನ ಅಚಲ ಪರಂಪರೆಗೆ ಸೇರಿದವು. ಕೋಲಾರ, ಬಳ್ಳಾರಿ ಮತ್ತು ತುಮಕೂರು ಜಿಲ್ಲೆಯ ಗಡಿಭಾಗಗಳಲ್ಲಿ ಚಾಲ್ತಿಯಲ್ಲಿವೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕೆಂಚಾವಧೂತರು ನಾಡಿನ ಅವಧೂತ ಪರಂಪರೆಯಲ್ಲಿ ದೊಡ್ಡ ಹೆಸರು. ಅವರಿಂದ ಅಥವಾ ಅವರ ಶಿಷ್ಯರಿಂದ ರಚಿತವಾದ ಒಂದೆರಡು ತತ್ವಪದಗಳು ಈ ಸಂಕಲನದಲ್ಲಿವೆ.
©2024 Book Brahma Private Limited.