ಕಲ್ಯಾಣರಾವ್ ಜಿ. ಪಾಟೀಲ ಅವರ ‘ಶಬ್ದಮಣಿ ದರ್ಪಣ ದೀಪಿಕೆ-ಕೃತಿಯು ಕಲಬುರಗಿಯ ಬಸವ ಪ್ರಕಾಶನ (2009) ನಂತರ ಪರಿಷ್ಕೃತ ಆವೃತ್ತಿಯು 2012 ರಲ್ಲಿ ಪ್ರಕಟಗೊಂಡಿತ್ತು. ಸದ್ಯದ ಕೃತಿಯು 3ನೇ ಆವೃತ್ತಿ. ಬಿ.ಎ., ಎಂ.ಎ., ಬಿ.ಇಡಿ. ಕೆ.ಎ.ಎಸ್; ಐ.ಎ.ಎಸ್ ಹೀಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೂ ಶಬ್ದಮಣಿ ದರ್ಪಣ ಅಥವಾ ಹಳಗನ್ನಡ ವ್ಯಾಕರಣವೆಂದರೆ ಅಂಜುವ ಪರೀಕ್ಷಾರ್ಥಿಗಳೇ ಹೆಚ್ಚು. ಹೀಗಾಗಿ, ಹಳಗನ್ನಡ ವ್ಯಾಕರಣವನ್ನು ಸರಳೀಕರಿಸಿದೆ. ಕಳೆದ 25 ವರ್ಷಗಳ ಸ್ನಾತಕ, ಸ್ನಾತಕೋತ್ತರ ಕನ್ನಡ ಪ್ರಶ್ನೆಪತ್ರಿಕೆಗಳನ್ನು ಎದುರಿಗಿಟ್ಟುಕೊಂಡು ಅವುಗಳೆಲ್ಲವನ್ನೂ ಏಕಕಾಲಕ್ಕೆ ಉತ್ತರಿಸಬಲ್ಲ ಕೃತಿಯನ್ನು ರೂಪುಗೊಳಿಸಲಾಗಿದೆ. ‘ಶಬ್ದಮಣಿದರ್ಪಣ’ ವೆಂಬ ದಟ್ಟಾರಣ್ಯದಲ್ಲಿ ಪ್ರವೇಶ ಬಯಸುವ ಅಭ್ಯರ್ಥಿಗಳಿಗೆ ಇದು ದೀಪಿಕೆ. ಈ ಕೃತಿಯಲ್ಲಿ ಎರಡು ಭಾಗಗಳಿವೆ. ಶಬ್ದಮಣಿದರ್ಪಣದ ಪೀಠಿಕಾ, ಸಂಜ್ಞಾ, ಸಂಧಿ, ನಾಮ, ಸಮಾಸ ಮತ್ತು ಆಖ್ಯಾತ ಪ್ರಕರಣಗಳಲ್ಲಿರುವ ಮಹತ್ವ ಸೂತ್ರಗಳಿವೆ. ನಂತರದಲ್ಲಿ ಕವಿ-ಕೃತಿ ಪರಿಚಯ, ಶಬ್ದಮಣಿದರ್ಪಣದಲ್ಲಿರುವ ಮಹತ್ವದ ಹದಿನೈದು ವಿಷಯ, 3ನೇ ಭಾಗದಲ್ಲಿ 21 ಟಿಪ್ಪಣಿಗಳನ್ನು ವಿಶ್ಲೇಷಿಸಿದೆ. ಅನುಬಂಧಗಳು ನೀಡಿದ್ದು, ಪಾರಿಭಾಷಿಕ ಶಬ್ದಗಳಿಗೆ ಸರಳ ಅರ್ಥ ನೀಡಲಾಗಿದೆ. ಗ್ರಂಥಋಣದಲ್ಲಿ ಈವರೆಗೆ ಶಬ್ದಮಣಿದರ್ಪಣ ಕುರಿತು ಪ್ರಕಟಿತ ಮಹತ್ವದ ಕೃತಿಗಳ ಯಾದಿ ನೀಡಿದೆ ಎಂದು ಲೇಖಕರು ತಿಳಿಸಿದ್ದಾರೆ.
©2024 Book Brahma Private Limited.