ಲೇಖಕರಾದ ಡಾ. ಕಲ್ಯಾಣರಾವ್ ಜಿ. ಪಾಟೀಲ, ರಾಜಕುಮಾರ ಆರ್. ಪಾಟೀಲ ಹಾಗೂ ಲಕ್ಷ್ಮಿಕಾಂತ ಪಂಚಾಳ ಅವರು ಪಿಡಿಓ, ಎಸ್ ಡಿಎ, ಎಫ್ ಡಿಎ ಹೀಗೆ ವಿವಿಧ ಹುದ್ದೆಗಳಿಗಾಗಿ ನಡೆಯುವ ಸ್ಪರ್ಧಾತ್ಮಕ ಪರೀಕ್ಷಾರ್ಥೀಗಳಿಗಾಗಿ ರಚಿಸಿದ ಕೃತಿ ಇದು. ಈ ಸ್ಪರ್ಧಾ ಕೈಪಿಡಿಯು ಒಂದು ಅತ್ಯುತ್ತಮ ಆಕರ ಗ್ರಂಥ. ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಕನ್ನಡಾಸಕ್ತ ಅಭಿಮಾನಿಗಳಿಗೆ, ಅದರಲ್ಲೂ ವಿಶೇಷವಾಗಿ ಸ್ಪರ್ಧಾಳುಗಳಿಗೆ ಇದೊಂದು ಉಪಯುಕ್ತವಾದ ಕಣಜ. ಪರೀಕ್ಷಾ ಸಂದರ್ಭದಲ್ಲಿ ಲೇಖಕರು ಎದುರಿಸಿದ ಸಮಸ್ಯೆಗಳ ಬಗ್ಗೆ ಅವರಿಗೆ ಅನುಭವವಿದೆ. ಈ ಬೆಳಕಿನಲ್ಲಿ ಕೃತಿ ರಚಿಸಿದ್ದು, ಅಧ್ಯಯನ ಮತ್ತು ಸ್ಪರ್ಧಾನುಭವಗಳ ಸಮಪಾಕವೇ ಪ್ರಸ್ತುತ ಕೃತಿ. ಕನ್ನಡ ನಾಡು-ನುಡಿ ಪರಪಂಪರೆ, ಪೂರ್ವದ ಹಳಗನ್ನಡ ಸಾಹಿತ್ಯ, ಹಳಗನ್ನಡ ಸಾಹಿತ್ಯ, ನಡುಗನ್ನಡ ಸಾಹಿತ್ಯ ಮತ್ತು ಹೊಸಗನ್ನಡ ಸಾಹಿತ್ಯದ ಕವಿ-ಕೃತಿ, ರೂಪಗಳ ವಿಶೇಷ ಮಾಹಿತಿಯನ್ನು ಸಂಗ್ರಹಿಸಿದೆ. ಪ್ರಾಚೀನ ಕನ್ನಡ ಸಾಹಿತ್ಯದಿಂದ ಹಿಡಿದು ಆಧುನಿಕ ಸಾಹಿತ್ಯದ ಮಹತ್ವದ ವಿಷಯಗಳನ್ನುಸಂಗ್ರಹಿಸಿದೆ. ಕನ್ನಡ ಭಾಷೆಯ ವ್ಯಾಕರಣಕ್ಕೆ ಸಂಬಂಧಿಸಿದ ಪ್ರಮುಖ ಅಂಶಗಳು, ಸಮಾನಾರ್ಥಕ, ವಿರುದ್ದಾರ್ಥಕ, ತತ್ಸಮ-ತದ್ಭವ, ನುಡಿಗಟ್ಟು, ವಾಕ್ಯದೋಷ, ಶುದ್ಧ ಬರಹಾದಿ ಸಂಗತಿಗಳನ್ನು ಉದಾಹರಣೆ ಸಹಿತ ವಿಶ್ಲೇಷಿಸಲಾಗಿದೆ. ಕಳೆದ ಒಂದು ದಶಕದಲ್ಲಿ ನಡೆದ ಎಸ್.ಡಿ.ಎ. ಮತ್ತು ಎಫ್.ಡಿ.ಎ.ಗಳ (ಉತ್ತರ ಸಹಿತ) ಪ್ರಶ್ನೆಪತ್ರಿಕೆಗಳನ್ನು ಸಂಗ್ರಹಿಸಲಾಗಿದೆ. ಸಾಹಿತ್ಯ ಚರಿತ್ರೆ, ವ್ಯಾಕರಣ ಮತ್ತು ಭಾಷಾಭ್ಯಾಸ ಗಳಿಗೆ ಸಂಬಂಧಿಸಿದಂತೆ ಈವರೆಗೆ ಬಂದಿರುವ ಬಹುತೇಕ ಪ್ರೌಢಗ್ರಂಥಗಳನ್ನು ಪರಿಶೀಲಿಸಲಾಗಿದೆ.
©2024 Book Brahma Private Limited.