ಸಮಾಜಕ್ಕೂ ಸರಕಾರಕ್ಕೂ ಸಂಬಂಧವಿದೆಯೇ!? ಹರಿಹರಪ್ರಿಯ ಅವರ ವೈಚಾರಿಕ ಲೇಖನವಾಗಿದೆ. ಈ ಕೃತಿಯು ಪ್ರತೀದಿನ, ಪ್ರತೀಕ್ಷಣ ರಾಷ್ಟ್ರದಲ್ಲಿ, ರಾಜ್ಯದಲ್ಲಿ ಪ್ರಜಾಪ್ರಭುತ್ವದ ಕಗ್ಗೋಲೆ ನಡೆದಿದೆ: ರಾಜಕಾರಣಿಗಳು ಎಂದು ಅಧಿಕಾರಿಗಳು, ಅಧಿಕಾರಿಗಳು ಎಂದು ನ್ಯಾಯಾಂಗದವರು, ನ್ಯಾಯಾಲಯಗಳು ಎಂದು ಸಮೂಹ ಮಾಧ್ಯಮಗಳು - ಕೊಕ್ಕೋ ಆಟದಲ್ಲಿ ತೊಡಗಿವೆ. ಹೀಗಾಗಿ ಸಮಾಜ ಹಾಗೂ ಸರಕಾರಗಳ ಸಂಬಂಧ ಸಮತೋಲನ ತಪ್ಪಿದೆ. ಇಂಥ ಸಂದರ್ಭದಲ್ಲಿ ಸಾಂಸ್ಕೃತಿಕ ರಂಗದವರು, ಗೆದ್ದೆತ್ತಿನ ಬಾಲವನ್ನೂ ಕೊಂಬನ್ನೊ ಹಿಡಿದು ತೂರಾಡುತ್ತಿದ್ದಾರೆ. ಕಳೆದ ಅಯ್ಯತ್ತು ವರ್ಷಗಳ ಇಂತಹ ಎಷ್ಟೋ ಸತ್ಯಸಂಗತಿಗಳು, ಇಲ್ಲಿನ ಪುಟ ಪುಟಗಳಲ್ಲಿ ರೂಪ ತಾಳಿವೆ. ದನಿಯೇನು, ಅಸ್ತಿತ್ವವನ್ನೇ ಹತ್ತಿಕ್ಕಲು ಸ್ವಯಂಸಿದ್ಧರು, ಸಮರೋಪಾದಿಯಲ್ಲಿ ಸಜ್ಜಾಗುತ್ತಿದ್ದಾರೆ. ಪ್ರತಿಯೊಬ್ಬರೂ ತಮ್ಮ ಪ್ರಾಣವಾಯು, ಮೆದುಳು, ಬುದ್ಧಿ ಸಂರಕ್ಷಿಸಿಕೊಳ್ಳಲು 'ಸಮಾಜಕ್ಕೂ ಸರಕಾರಕ್ಕೂ ಸಂಬಂಧವಿದೆಯೇ?' ಎಂಬ ಆಶ್ಚರ್ಯ ಪ್ರಶ್ನೆಯನ್ನು ತಮ್ಮೊಳಗೇ ಪ್ರತಿಧ್ವನಿಸಲೆಂದೇ, ಮೊಟ್ಟ ಮೊದಲ ಬಾರಿಗೆ ಹಕ್ಕು ಬಾಧ್ಯತೆ ಹೊತ್ತ ಕನ್ನಡದ ಕೃತಿಯೊಂದು, ನಿಮ್ಮ ಕೈಸೇರುತ್ತಿದೆ. ಆ ಮೂಲಕ ಪಂಚೇಂದ್ರಿಯಗಳು ಸ್ವಚ್ಛಗೊಳ್ಳಲಿ, ಪ್ರಜಾಪ್ರಭುತ್ವ ಸಂರಕ್ಷಣೆಗೊಳ್ಳಲಿ, ಮಾನವ ಧರ್ಮ ಸ್ಥಾಪಿತಗೊಳ್ಳಲಿ” ಎಂಬುದು 'ಪುಸ್ತಕಮನೆ' ಹರಿಹರಪ್ರಿಯರ ಬದುಕಿನ ಮಹತ್ವಾಕಾಂಕ್ಷೆ ಹಾಗೂ ಕೃತಿಯ ಉದ್ದೇಶವಾಗಿದೆ.
©2024 Book Brahma Private Limited.