‘ದೇವೇಗೌಡರ ಪ್ರಧಾನಿಯ ದಿನಗಳು’ ಹಿರಿಯ ಪತ್ರಕರ್ತ, ಲೇಖಕ ಶಿವಾಜಿ ಗಣೇಶನ್ ಅವರು ಬರೆದಿರುವ ಕೃತಿ. ಈ ಕೃತಿಗೆ ಲೋಕಸಭೆಯ ಮಾಜಿ ಸದಸ್ಯರಾದ ಡಾ.ಬಿ.ಎಲ್. ಶಂಕರ್ ಅವರ ಮುನ್ನುಡಿ ಹಾಗು ಕೆ ಸುಬ್ರಹ್ಮಣ್ಯ ಅವರ ಬೆನ್ನುಡಿ ಬರಹಗಳಿವೆ. ಕೃತಿಯ ಕುರಿತು ವಿವರಿಸಿರುವ ಬಿ.ಎಲ್. ಶಂಕರ್ ‘ಸಹಜನ್ಯಾಯದ ದೃಷ್ಟಿಯಲ್ಲಿ ಪ್ರಕಟವಾಗಲೇಬೇಕಿದ್ದ ಇಂಥ ಒಂದು ಅನನ್ಯ, ಅಮೂಲ್ಯ ಕೃತಿಯನ್ನು ಕೊನೆಗೂ ಪೂರ್ಣಗೊಳಿಸಿ ಸಾರ್ವಜನಿಕ ಅಧ್ಯಯನಕ್ಕೆ ಅನುವುಮಾಡಿಕೊಟ್ಟ ಶಿವಾಜಿ ಗಣೇಶನ್ ರವರಿಗೆ ಕನ್ನಡಿಗರೆಲ್ಲರ ಪರವಾಗಿ ಅಭಿನಂದನೆಗಳು ಸಲ್ಲಲೇಬೇಕು ಎಂದಿದ್ದಾರೆ.. ದೇವೇಗೌಡರ ಆಡಳಿತಾವಧಿಯಲ್ಲಿನ ಹಲವಷ್ಟು ವಿಚಾರಗಳನ್ನು ಸ್ಪಷ್ಟವಾಗಿ, ವಸ್ತುನಿಷ್ಠವಾಗಿ ಮತ್ತು ನಿಖರವಾಗಿ ವಿವಿಧ ಅಧ್ಯಾಯಗಳಲ್ಲಿ ಪ್ರಸ್ತುತಪಡಿಸಿದ್ದಾರೆ. ಈ ಕೃತಿಯು ತನ್ನ ಉದ್ದೇಶಿತ ಗುರಿಯನ್ನು ತಲುಪುವಲ್ಲಿ ಯಾವ ಸಂಶಯವೂ ಇಲ್ಲ. ವಿಶೇಷವಾಗಿ ಪ್ರಸ್ತುತ ಪೀಳಿಗೆಯ ಹಾಗೂ ಭವಿಷ್ಯದಲ್ಲಿ ಸಾರ್ವಜನಿಕ ರಾಜಕಾರಣದಲ್ಲಿ ನೇರವಾಗಿ ಧುಮುಕುವ ಆಸಕ್ತಿಯುಳ್ಳವರು; ರಾಜಕೀಯ ಶಾಸ್ತ್ರವನ್ನು ಅಭ್ಯಸಿಸುವ ವಿದ್ಯಾರ್ಥಿಮಿತ್ರರು ಹಾಗೂ ಅವರುಗಳನ್ನು ರೂಪಿಸುವ ಉಪನ್ಯಾಸಕರುಗಳು ಓದಲೇಬೇಕಾದ ಕೃತಿಯಿದು ಎಂದಿದ್ದಾರೆ.
©2024 Book Brahma Private Limited.