ರಾಜಕೀಯ ಯಾವ ಕಾಲದ್ದಾದರೂ ರೋಚಕವೆ. ಜಗತ್ತಿನ ಯಾವುದೇ ದೇಶದ ರಾಜಕೀಯ ಘಟನೆಗಳನ್ನು ಓದುವಾಗ ಅಲ್ಲಲ್ಲಿನ ಒಳಸುಗಳು ನಮ್ಮನ್ನು ಆಳಕ್ಕೆ ಕರೆದೊಯ್ಯುತ್ತವೆ. ರಾಜಕಾರಣಿ ಮತ್ತು ರಾಜಕೀಯ ಕುರಿತು. ಸಮಾಜದಲ್ಲಿ ಯಾವಾಗಲೂ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಎಷ್ಟೇ ಕೆಟ್ಟ ಅಭಿಪ್ರಾಯಗಳು ವ್ಯಕ್ತವಾದರೂ ಚುನಾವಣಿಗಳು ಮಾತ್ರ ಹಬ್ಬದಂತೆ ಆಚರಣೆಗೊಳ್ಳುತ್ತವೆ. ದುರ್ಬೀನು ಹಾಕಿಕೊಂಡು ಹುಡುಕಿದರೂ ಸಚ್ಚಾರಿತ್ರಂತ್ರ್ಯವಂತ ರಾಜಕೀಯ ನಾಯಕ ಕಾಣದ ಸ್ಥಿತಿಗೆ ರಾಜ್ಯವನ್ನು ತಂದು ನಿಲ್ಲಸಿದ್ದಾರೆ. ಯಾವುದು ನಾಲ್ಕು ಗೋಡೆಗಳ ಮಧ್ಯೆ ನಡೆಯ ಬೇಕಾಗಿತ್ತೋ ಅದು ಸಾರ್ವಜನಿಕಗೊಂಡದ್ದನ್ನು ಮಾಧ್ಯಮಗಳು ತೋರಿಸಿವೆ. 'ರಾಜಕಾರಣ ಪುಸ್ತಕ ರೂಪದಲ್ಲಿ ದಾಖಲಾಗಬೇಕು. ಅದು ಮುಂದಿನ ತಲೆಮಾರಿಗೆ ತಲುಪಬೇಕು' ಎಂದು ಬಹಳಷ್ಟು ಜನ ಹೇಳುವುದನ್ನು ಕೇಳಿದ್ದೇನೆ, ಆದರೆ ಯಾವ ರಾಜಕೀಯ ಇತಿಹಾಸ ದಾಖಲಾಗಬೇಕು? ವಿಧವೆಯರಿಗೂ ಹಕ್ಕು ಬೇಕು ಎಂದು ಸಂಸತ್ತಿನಲ್ಲಿ ಜಲ್ ಮಂಡಿಸಲು ಅವಕಾಶ ಸಿಗದಿದ್ದಾಗ ಕಾನೂನು ಸಚಿವ ಸ್ಥಾನಕ್ಕೆ ರಾಜೀನಾಮಕೊಟ್ಟ ಡಾ.ಟಿ.ಆರ್. ಅಂಬೇಡ್ಕ ಅವರ ಇತಿಹಾಸವಾ? ರೈಲು ಹತಪ್ಪಿ ಜನ ಸತ್ತರು ಎಂದು ನೈತಿಕ ಹೊಣೆಹೊತ್ತು ರೈಲ್ವೆ ಸಚಿವಸ್ಥಾನಕ್ಕೆ ರಾಜೀನಾಮೆ ಕೊಟ್ಟ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಇತಿಹಾಸವಾ? ಅಥವಾ ಮಾಡಬಾರದ್ದನ್ನು ಮಾಡಿ ಕೇಳದರೂ ರಾಜೀನಾಮ ಕೂಡದ ಮೊಂಡು ವಾದ ಮಂಡಿಸಿದ ವಿತಂಡವಾದಿಗಳ ಇತಿಹಾಸವಾ? ಯಾವುದನ್ನು ಮುಂದಿನ ತಲೆಮಾರು ಅರಿಯಬೇಕು?
©2024 Book Brahma Private Limited.