ವ್ಯಕ್ತಿಗತ ಆಸಕ್ತಿಗಳು ಏನಿದ್ದರೂ ಸಹ ಸಾಮಾಜಿಕ ಬದುಕಿನಲ್ಲಿ ರಾಜಕೀಯ ಕ್ಷೇತ್ರವನ್ನು ಕಡೆಗಣಿಸುವಂತಿಲ್ಲ. ಈ ಕಾರಣಕ್ಕಾಗಿ ಯುವ ಪೀಳಿಗೆಗೆ ರಾಜಕೀಯ ವಿದ್ಯಮಾನಗಳ ಬಗ್ಗೆ ಅರಿವು ಅವಶ್ಯ ಎಂಬ ಹಿನ್ನೆಲೆಯಲ್ಲಿ ಸಿದ್ದಾರ್ಥ ವಾಡೆನ್ನವರ್ ಅವರು ಬರೆದ ಕೃತಿಯೇ-ಕರ್ನಾಟಕ ಪಾಲಿಟಿಕ್ಸ್.
ಮುದ್ರಣ, ವಿದ್ಯುನ್ಮಾನ ಹಾಗೂ ಸಾಮಾಜಿಕ ಜಾಲತಾಣಗಳ ಮಾಹಿತಿ ಮೂಲಗಳನ್ನು ಪರಿಶೀಲಿಸಿ, ಸತ್ತಾಸತ್ಯತೆಗಳ ಹಿನ್ನೆಲೆಯಲ್ಲಿ ಕರ್ನಾಟಕದ ಒಟ್ಟು 224 ವಿಧಾನಸಭಾ ಕ್ಷೇತ್ರಗಳ ಮಾಹಿತಿಯನ್ನು, ಅಲ್ಲಿಯ ರಾಜಕೀಯ ವಿದ್ಯಮಾನಗಳ ಸ್ವರೂಪವನ್ನು ಚಿತ್ರಿಸಿದ್ದಾರೆ. ಈ ಜಿಜ್ಞಾಸೆಯಲ್ಲಿ ವ್ಯಕ್ತಿ, ಜಾತಿ, ಧರ್ಮ, ನಾಯಕತ್ವ, ಪಕ್ಷ ಬಲ ಹೀಗೆ ವಿವಿಧ ಅಂಶಗಳ ಹಿನ್ನೆಲೆಯಲ್ಲಿ ಪ್ರತಿ ಕ್ಷೇತ್ರವನ್ನು ಪ್ರತ್ಯೇಕವಾಗಿ ವಿಶ್ಲೇಷಿಸಿದ್ದು ಈ ಕೃತಿಯ ವಿಶೇಷ.
ರಾಜ್ಯಶಾಸ್ತ್ರ ವಿದ್ಯಾರ್ಥಿಗಳಿಗೂ, ರಾಜಕಾರಣಿಗಳಿಗೂ ಹಾಗೂ ರಾಜಕೀಯ ವಿದ್ಯಮಾನಗಳನ್ನು ಅರ್ಥ ಮಾಡಿಕೊಳ್ಳುವ ಆಸಕ್ತರಿಗೂ ಈ ಕೃತಿ ಕೆಲವೊಂದು ಹೊಳವುಗಳನ್ನು ನೀಡುತ್ತದೆ.
©2024 Book Brahma Private Limited.