ಸಂವಿಧಾನದ ಆಶಯಗಳ ಸಾರವೇ ಸಂವಿಧಾನದ ಪೀಠಿಕೆಯಾಗಿದೆ. ಆ ಕಾರಣದಿಂದಲೇ ಅನೇಕ ರಾಜತಾಂತ್ರಿಕ ಪರಿಣಿತರು ಹಾಗೂ ಸಾಮಾಜಿಕ ಚಿಂತಕರು ಪೀಠಿಕೆಯನ್ನು ಸಂವಿಧಾನದ ಆತ್ಮ ಎಂದಿದ್ದಾರೆ ಎನ್ನುತ್ತದೆ ಲೇಖಕ ಅರವಿಂದ ನರೇನ್ ಹಾಗೂ ಪೂರ್ಣ ರವಿಶಂಕರ್ ಅವರ ‘ಸಂವಿಧಾನ ಪೀಠಿಕೆ ಒಂದು ಪುಟ್ಟ ಮುನ್ನುಡಿ’ ಕೃತಿ. ಸಂವಿಧಾನಿಕ ಮೌಲ್ಯಗಳಾದ ಸ್ವಾತಂತ್ಯ್ರ, ಸಮಾನತೆ ಮತ್ತು ಬಂಧುತ್ವವನ್ನು ಮನಗಾಣಿಸಲು ಉಲ್ಲೇಖಿಸಿರುವ ನ್ಯಾಯಾಲಯ ಪ್ರಕರಣಗಳು ಮತ್ತು ವಿಶ್ಲೇಷಣೆಗಳು ಇಲ್ಲಿ ಮುಖ್ಯವಾಗಿದೆ. ಕೃತಿಯು 7 ಭಾಗಗಳನ್ನು ಒಳಗೊಂಡಿದ್ದು, ಆರಂಭ, ಹೋರಾಟದ ಫಲವಾಗಿ ‘ಸ್ವಾತಂತ್ಯ್ರ’ ಅಧ್ಯಾಯದಲ್ಲಿ ರಾಜಕೀಯ ಸ್ವಾತಂತ್ಯ್ರ, ಸಾಮಾಜಿಕ ಸ್ವಾತಂತ್ಯ್ರ, ಆರ್ಥಿಕ ಸ್ವಾತಂತ್ಯ್ರ, ಭಾರತದ ಸಂವಿಧಾನದ ಪೀಠಿಕೆ ಅಧ್ಯಾಯದಲ್ಲಿ ಪೀಠಿಕೆಯ ಪೂರ್ವಸೂಚಕಗಳು, ಭಾರತದ ಜನತೆಯಾದ ನಾವು, ಸಾರ್ವಭೌಮ ಪ್ರಜಾತಂತ್ರ ಗಣರಾಜ್ಯ, ಮತಧರ್ಮ ನಿರಪೇಕ್ಷತೆ, ಸಮಾಜವಾದಿ, ನ್ಯಾಯಪರತೆ, ಸ್ವಾತಂತ್ಯ್ರ, ಸಮಾನತೆ, ಬಂಧುತ್ವ, ಘನತೆ, ಕೊನೆಯ ಮಾತು, ಕೊನೆಯ ಟಿಪ್ಪಣಿಗಳು ವಿಚಾರವನ್ನು ಒಳಗೊಂಡಿದೆ.
©2024 Book Brahma Private Limited.