ರಾಜಕೀಯ ಮತ್ತು ಸಾರ್ವಜನಿಕ ನಾಯಕತ್ವಕ್ಕೆ ಸ್ಫೂರ್ತಿದಾಯಕ ದಿಕ್ಸೂಚಿ. ಸ್ವಾರ್ಥಿಗಳಾಗಿ ಬದುಕುವ ಬದಲು ಜನಸೇವೆಯ ಮುಖಾಂತರ ಸಾರ್ಥಕ ಬದುಕು ನಮ್ಮದಾಗಿಸಿಕೊಳ್ಳಬೇಕು. ಪ್ರಜೆಗಳು ಮತ್ತು ದೇಶಕ್ಕೆ ಸೇವೆ ಸಲ್ಲಿಸಲು, ಸಾರ್ವಜನಿಕ ಮತ್ತು ರಾಜಕೀಯ ರಂಗದಲ್ಲಿ ನಾಯಕರಾಗಲು, ನಾಯಕತ್ವದಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಲು ಜೊತೆಗೆ ನಾಯಕತ್ವÀದಲ್ಲಿ ಹಂತ-ಹಂತವಾಗಿ ಉನ್ನತ ಸ್ಥಾನಕ್ಕೆ ತಲುಪಲು ಯಾವ ದಾರಿಯಲ್ಲಿ ಸಾಗಬೇಕೆಂಬುದನ್ನು ಸಾಮಾಜಿಕ ಮತ್ತು ಆರ್ಥಿಕ ದೃಷ್ಠಿಕೋನದಿಂದ, ಶೈಕ್ಷಣಿಕವಾಗಿ, ತಾರ್ಕಿಕ ಶಾಸ್ತ್ರದ ಪ್ರಕಾರ, ವಿವಿಧ ಪಂಥಗಳ ದೃಷ್ಠಿಯಿಂದ, ಜಗತ್ತಿನ ಮಹಾನ್ ನಾಯಕರ ಅನುಭವದಿಂದ, ಇತಿಹಾಸದ ಅಧ್ಯಯನದಿಂದ, ಧ್ಯಾನ-ಆಧ್ಯಾತ್ಮದ ಅನುಭವದಿಂದ ಹಾಗೂ ಕೌಟಲೀಯ ಅರ್ಥಶಾಸ್ತ್ರದ ದೃಷ್ಠಿಕೋನದಿಂದ ಅವಲೋಕಿಸಿ ವಿಶ್ಲೇಷಿಸಿದ ಗ್ರಂಥ ಇದಾಗಿದೆ.
ಯುವಶಕ್ತಿ, ಸಾರ್ವಜನಿಕ ರಂಗದಲ್ಲಿ ಹೋರಾಡುತ್ತಿರುವವರು, ರಾಜಕೀಯ ರಂಗದಲ್ಲಿ ಸೇವೆ ಸಲ್ಲಿಸುತ್ತಿರುವವರು, ಸದಾಕಾಲ ಜನಸೇವೆಯಲ್ಲಿ ತೊಡಗಿದವರು ಇವರೆಲ್ಲರಿಗೂ ಸಮಾಜ ಮತ್ತು ರಾಜಕೀಯ ವ್ಯವಸ್ಥೆಯ ಅಗತ್ಯತೆಗಳನ್ನು ತಿಳಿದುಕೊಳ್ಳಲು ಈ “ಪೀಪಲ್ಸ್ ಚಾಣಕ್ಯ” ಗ್ರಂಥ ಸ್ಫೂರ್ತಿದಾಯಕವಾಗಿದೆ
©2024 Book Brahma Private Limited.