ಭಾರತದ ರಾಜಕೀಯ ಮತ್ತು ಬೌದ್ಧಿಕ ವಲಯದಲ್ಲಿ ಇಂದು ಅತಿ ಹೆಚ್ಚು ಚರ್ಚೆಗೆ ಒಳಪಡುತ್ತಿರುವ ವಿಚಾರಗಳಲ್ಲಿ ಸೆಕ್ಯುಲರ್‌ವಾದವೂ ಕೂಡ ಒಂದು. ಆದರೆ ಈ ಚರ್ಚೆಗಳು ಒಂದೋ ಸೆಕ್ಯುಲರ್‌ವಾದದ ಹೆಸರಲ್ಲಿ ಪಕ್ಷರಾಜಕೀಯ ವಿವಾದಗಳನ್ನು ಮಾಡಲಾಗಿದೆ. ಇಲ್ಲವೇ ಸೆಕ್ಯುಲರ್‌ವಾದಕ್ಕೆ ಸಂಬಂಧವಿಲ್ಲದ ಜಾತಿ, ಭಾಷೆ, ಪ್ರಾದೇಶಿಕ ತಾರತಮ್ಯ ಇತ್ಯಾದಿ ವಿಚಾರಗಳನ್ನು ಸೆಕ್ಯುಲರ್‌ವಾದದ ಚರ್ಚೆಗಳೆಂಬಂತೆ ಇಟ್ಟುಕೊಂಡು ಪರಸ್ಪರರ ವಿರೋಧಗಳನ್ನು ಮಾಡಲಾಗುತ್ತದೆ. ಇನ್ನು ಬಹಳಷ್ಟು ಚರ್ಚೆಗಳು ಸೆಕ್ಯುಲರ್‌ವಾದ ಎಂದರೇನು ಎನ್ನುವುದರ ಕುರಿತೇ ಸ್ಪಷ್ಟತೆ ಇಲ್ಲದೆ, ಪರಸ್ಪರ ತಮ್ಮದೇ ನಿಜವಾದ ಸೆಕ್ಯುಲರ್‌ವಾದವೆಂದೂ ಮತ್ತೊಬ್ಬರದ್ದು ಸೆಕ್ಯುಲರ್ ವಿರೋಧವೆಂದೂ ಆಪಾದನೆಯಲ್ಲಿ ತೊಡಗುವ ವಾದಗಳಾಗುತ್ತಿರುತ್ತವೆ. ಅಂದರೆ ಸೆಕ್ಯುಲರ್‌ವಾದದ ಕುರಿತು ಮೂಲಭೂತ ಸೈದ್ಧಾಂತಿಕ ತಿಳಿವಳಿಕೆ ಮತ್ತು ಸ್ಪಷ್ಟತೆಯ ಕೊರತೆ ಬಹಳಷ್ಟು ವಿವಾದಗಳಿಗೆ ಕಾರಣವಾಗುತ್ತಿವೆ. ಹಾಗಾಗಿ ಈ ಕೃತಿಯು ರಾಜ್ಯಶಾಸ್ತ್ರದ ಶಿಸ್ತಿನ ಚೌಕಟ್ಟಿನಲ್ಲಿ ಸೆಕ್ಯುಲರ್‌ವಾದದ ಉಗಮ, ಬೆಳವಣಿಗೆ, ಅದರ ಪರ-ವಿರೋಧದ ವಾದಗಳನ್ನು ಸರಳವಾಗಿ ಪ್ರಸ್ತುತಪಡಿಸುವ ಪ್ರಯತ್ನ ಮಾಡುತ್ತದೆ.
©2024 Book Brahma Private Limited.