ಯು.ಭೂಪತಿಯವರು ಶಾಸಕರಾಗಿದ್ದಾಗ ಸದನದಲ್ಲಿ ಎತ್ತಿದ ಪ್ರಶ್ನೆಗಳು, ಮಾಡಿದ ಚರ್ಚೆಗಳು, ಮಂಡಿಸಿದ ವಾದಗಳನ್ನು ಈ ಕೃತಿ ಒಳಗೊಂಡಿದೆ. ಈ ಕೃತಿಯಲ್ಲಿನ ವಿಷಯಗಳು ಕೇವಲ ಪ್ರಶ್ನೋತ್ತರಗಳಿಗೆ ಸೀಮಿತವಾಗದೇ ಒಂದು ಕಾಲದ ಕರ್ನಾಟಕದ ಸಮಾಜೋರಾಜಕೀಯ ಸ್ಥಿತಿಗತಿಗಳ ಇತಿಹಾಸವನ್ನು ಒಳಗೊಂಡಿವೆ. ಭೂಪತಿಯವರು ಸದನದಲ್ಲಿ ಎತ್ತಿದ ಪ್ರಶ್ನೆಗಳು, ಮಾಡಿದ ಚರ್ಚೆಗಳು ಕೇವಲ ಅವರ ಮತಕ್ಷೇತ್ರಕ್ಕೆ ಸೀಮಿತವಾದುದಲ್ಲ, ರಾಜ್ಯದ, ದೇಶದ ಅಂದಿನ ಹಲವಾರು ವಿದ್ಯಮಾನಗಳಿಗೆ ಸಂಬಂಧಪಟ್ಟಿವೆ. ಅವರ ಹಲವಾರು ಪ್ರಶ್ನೆಗಳು ಕೇವಲ ಸರಕಾರ ಮತ್ತು ಆಡಳಿತ ಪಕ್ಷಕ್ಕೆ ಮಾತ್ರವಲ್ಲ ಒಂದು ವ್ಯವಸ್ಥೆಯನ್ನೇ ಪರಿಶೀಲಿಸುವ ಮಹತ್ವವನ್ನು ಪಡೆದಿವೆ. ಭೂಪತಿಯವರು ಮಾತನಾಡದ ವಿಷಯಗಳೇ ಇಲ್ಲ. ಅಕ್ರಮ ಗಣಿಗಾರಿಕೆ, ಭ್ರಷ್ಟಾಚಾರ, ನೀರಾವರಿ, ಕೃಷಿ ಮಾರುಕಟ್ಟೆ, ಶಿಕ್ಷಣ, ಲಾಕಪ್‌ಡೆತ್, ಕೋಮುಗಲಭೆ, ಗ್ರಾನೈಟ್ ಅಕ್ರಮ, ವಿದ್ಯುತ್ ಸಮಸ್ಯೆ, ವರದಕ್ಷಿಣೆ ಸಾವು, ಬಡವರ ವಸತಿ ಸಮಸ್ಯೆ, ವಿಶ್ವವಿದ್ಯಾಲಯಗಳ ಸಮಸ್ಯೆ, ವಿದ್ಯಾರ್ಥಿಗಳ ಹಾಸ್ಟೆಲ್ ಸಮಸ್ಯೆ, ಕಾರ್ಮಿಕರ ಸಮಸ್ಯೆ, ಪಶುಸಂಗೋಪನೆ, ಬರಗಾಲ, ಆರೋಗ್ಯ ಸಮಸ್ಯೆ, ಸಾರಿಗೆ, ಪರಿಸರ ರಕ್ಷಣೆ, ರೈತರ ಹೋರಾಟ ಹೀಗೆ ಎಲ್ಲ ವಿಷಯಗಳ ಕುರಿತು ಪ್ರತಿ ಅಧಿವೇಶನದಲ್ಲೂ ಮಾತನಾಡಿದ್ದಾರೆ. ಇವರ ಹಲವಾರು ಪ್ರಶ್ನೆಗಳಿಗೆ ಸಚಿವರೇ ನಿರುತ್ತರವಾದ ಸಂದರ್ಭಗಳು ಈ ಕೃತಿಯಲ್ಲಿ ದಾಖಲಾಗಿವೆ ಎಂದು ಸಿದ್ಧನಗೌಡ ಪಾಟೀಲ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
©2024 Book Brahma Private Limited.