ಲೇಖಕ ಎ.ಎನ್. ಅಂಜನಪ್ಪ ಅವರು ಬರೆದ ಕೃತಿ-ಮೆಂಟಲ್ ಎಬಿಲಿಟಿ. ಕರ್ನಾಟಕ ರಾಜ್ಯ ಸರ್ಕಾರ ನಡೆಸುವ ಎಲ್ಲ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ, ವಿದ್ಯಾರ್ಥಿಗಳ ಅನುಕೂಲದ ದೃಷ್ಟಿಯಿಂದ, ಈ ಕೃತಿಯನ್ನು ರಚಿಸಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಅಗತ್ಯವಾಗಿ ಬೇಕಿರುವ ಮನೋಸ್ಥೈರ್ಯ, ಪ್ರಶ್ನೆಗಳನ್ನು ಎದುರಿಸಲು ಮೊದಲು ಸಮಾಧಾನಚಿತ್ತರಾಗಿ ಪ್ರಶ್ನೆಗಳನ್ನು ಓದಿ ಅರ್ಥೈಸಿಕೊಳ್ಳುವ ವ್ಯವಧಾನ, ಗಣಿತ ಸೂತ್ರಗಳನ್ನು ನೆನಪಿಟ್ಟುಕೊಳ್ಳುವ ಜಾಣ್ಮೆ, ನೆನಪಿಗೆ ಬಾರದಿದ್ದರೂ ಗೊಂದಲಕ್ಕಿಡಾಗದ ಮನಸ್ಥಿತಿ ಇತ್ಯಾದಿ ಕುರಿತು ಸೂಕ್ತ ಮಾರ್ಗದರ್ಶನ ಇತ್ಯಾದಿ ಅಂಶಗಳೂ ಈ ಕೃತಿಯ ಹೆಗ್ಗಳಿಕೆ.
©2024 Book Brahma Private Limited.