1 ಯಿಂದ 445ರವರೆಗಿನ ಕನ್ನಡ ಕೃತಿಗಳ ಸೂಚಿಮಾಡಿ ಪ್ರಸ್ತಕ ಸಂಸ್ಕೃತಿ ಮರೆಯಾಗುತ್ತಿರುವ ಇಂದಿನ ದಿನಗಳಲ್ಲಿ ಹಸ್ತಪ್ರತಿ ಸಂಸ್ಕೃತಿಯ ಸಾಂಸ್ಕೃತಿಕತೆಯನ್ನು ಮನಗಾಣಿಸಿ ಕೊಡಬೇಕಾದ ಅನಿವಾಯ್ಯತೆ ಇರುವುದನ್ನು ಈ ಕೃತಿ ತಿಳಿಸಿಕೊಡುತ್ತದೆ. ವೈದ್ಯ, ಜ್ಯೋತಿಷ್ಯ, ವಾಸ್ತುಶಾಸ್ತ್ರ, ಶಿಲ್ಪಶಾಸ್ತ್ರ, ಅಶ್ವಶಾಸ್ತ್ರ, ಗಜಶಾಸ್ತ್ರ, ಪಶುವೈದ್ಯ ಇವೇ ಮೊದಲಾದ ವಿಷಯಗಳನ್ನು ಗರ್ಭಿಕರಿಸಿಕೊಂಡಿರುವ ಹಸ್ತಪ್ರತಿಗಳ ಕುರಿತಾದ ಸೂಚಿ ಸಂಪುಟ ಇದಾಗಿದೆ. ಸಂಪುಟದ ಅನುಬಂಧದಲ್ಲಿ ಕವಿ, ಸ್ಥಳನಾಮ, ಲಿಪಿಕಾರರು, ಬರೆಸಿದವರು, ಹಸ್ತಪ್ರತಿ ನೀಡಿದ ದಾನಿಗಳ ಕುರಿತ ವಿವರಗಳನ್ನು ನೀಡಲಾಗಿದೆ.
©2024 Book Brahma Private Limited.