ಕಡ್ಡಾಯ ಕನ್ನಡ-ಈ ಕೃತಿಯನ್ನು ಡಾ. ಕಲ್ಯಾಣರಾವ್ ಪಾಟೀಲ್ ಹಾಘೂ ಲಕ್ಷ್ಮಿಕಾಂತ ಪಂಚಾಳ ಅವರು ರಚಿಸಿದ್ದು, 2012 ಹಾಗೂ 2015 ರಲ್ಲಿ ಮುದ್ರಣ ಕಂಡಿತ್ತು. ವಿಷಯದ ಸಮಗ್ರ ಅರ್ಥೈಸುವಿಕೆ, ಕನ್ನಡ ಪದಜ್ಞಾನ ಮತ್ತು ಭಾÀಷಾಭ್ಯಾಸ, ಕನ್ನಡ ಪದ ಪ್ರಯೋಗಗಳು, ಲಘುಪ್ರಬಂಧಗಳು ಮತ್ತು ವಿಷಯ ಸಂಕ್ಷೇಪಣೆ, ಇಂಗ್ಲಿಷನಿಂದ ಕನ್ನಡಕ್ಕೆ ಭಾಷಾಂತರ ಹೀಗೆ ಮೊದಲಿದ್ಎಂದ ವಿಷಯಗಳನ್ಬನು ಪರಿಷ್ಕೃತಗೊಂಡು ಸದ್ಯದ ಆವೃತ್ತಿಯಲ್ಲಿ ಪ್ರಮುಖ ವ್ಯಾಕರಣಾಂಶಗಳು, ಸಂಕ್ಷಿಪ್ತ ಕನ್ನಡ ಸಾಹಿತ್ಯ ಸಮೀಕ್ಷೆಯನ್ನು ಹೆಚ್ಚುವರಿಯಾಗಿ ಸೇರಿಸಲಾಗಿದೆ. ಪದವಿಪೂರ್ವ ಕಾಲೇಜು ಉಪನ್ಯಾಸಕರ ನೇಮಕಾತಿ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳು ಮತ್ತು 2017ರಲ್ಲಿ ನಡೆದ ಪದವಿ ಕಾಲೇಜು ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಯಲ್ಲಿನ ಕಡ್ಡಾಯ ಕನ್ನಡ ಪ್ರಶ್ನೆಪತ್ರಿಕೆ, 2014ರಲ್ಲಿ ನಡೆದ ಕೆ.ಎ.ಎಸ್. ಮುಖ್ಯ ಪರೀಕ್ಷೆಯಲ್ಲಿನ ಕಡ್ಡಾಯ ಕನ್ನಡ ಪ್ರಶ್ನೆಪತ್ರಿಕೆ 2017ರಲ್ಲಿ ನಡೆದ ಎ ಮತ್ತು ಬಿ. ವೃಂದದ ಮತ್ತಿತರ ಇಲಾಖಾ ಪರೀಕ್ಷೆಗಳ ಕಡ್ಡಾಯ ಕನ್ನಡ ಪ್ರಶ್ನೆ ಪತ್ರಿಕೆಗಳನ್ನು ಸಂಗ್ರಹಿಸಿ ಉತ್ತರ ಸಹಿತ ವಿವರಣೆ ಕೊಟ್ಟಿದೆ. ಕರ್ನಾಟಕ ರಾಜ್ಯ ಸರಕಾರ, ಕರ್ನಾಟಕ ಲೋಕ ಸೇವಾ ಆಯೋಗ, ಪರೀಕ್ಷಾ ಪ್ರಾಧಿಕಾರಗಳು ನಡೆಸುವ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೂ ಕಡ್ಡಾಯ ಕನ್ನಡ ಪತ್ರಿಕೆ ಇರುತ್ತದೆ.
ಈ ಕೃತಿಗೆ ಮುನ್ನುಡಿ ಬರೆದಿರುವ ಕೆ.ಎ.ಎಸ್. ಅಧಿಕಾರಿ ಡಾ. ಶರಣಪ್ಪ ಸತ್ಯಂಪೇಟೆ ‘ಪಿ.ಯು. ಕಾಲೇಜು ಅಧ್ಯಾಪಕ ಹುದ್ದೆಯ ಆಕಾಂಕ್ಷಿಗಳು. ಹೀಗಾಗಿ ಕನ್ನಡ ವ್ಯಾಕರಣ, ಭಾಷಾಭ್ಯಾಸ ಹಾಗೂ ಆಡಳಿತಾತ್ಮಕ ಪದಕೋಶ ಇವೆಲ್ಲವನ್ನು ಸಂಯುಕ್ತಗೊಳಿಸಿ ‘ಕಡ್ಡಾಯ ಕನ್ನಡ’ ಕೃತಿಯನ್ನು ಸಿದ್ಧಪಡಿಸಿದ್ದಾರೆ. ಈ ಕೃತಿಯು ಮಾಧ್ಯಮಿಕ, ಪ್ರೌಢಶಾಲಾ, ವಿದ್ಯಾರ್ಥಿ-ಶಿಕ್ಷಕರಿಗೆ, ಪದವಿ ಪೂರ್ವ ಕಾಲೇಜು ಕನ್ನಡ ವಿದ್ಯಾರ್ಥಿ-ಅಧ್ಯಾಪಕರಿಗೆ ಭಾವಿ ಕಾಲೇಜು ಅಧ್ಯಾಪಕರಿಗೆ ಅನುಕೂಲ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.