ಸಮಕಾಲೀನ ಸಾಹಿತ್ಯಕ, ಸಾಂಸ್ಕೃತಿಕ ಹಾಗೂ ತಾಂತ್ರಿಕ ಸವಾಲುಗಳೊಂದಿಗೆ ಹಸ್ತಪ್ರತಿಗಳು ನಡೆಸುವ ಮುಖಾಮುಖಿ ಹಾಗೂ ಆ ಮುಖಾಮುಖಿ ಸುರಿಸುವ ಹೊಸ ಅಧ್ಯಯನ ಸಾಧ್ಯತೆಯನ್ನು ಚರ್ಚಿಸಲಾಗಿದೆ. ಹೊಸ ಕಾಲದ ಸಂವೇದನೆಗೆ ಪೂರಕವಾಗಿ ಹಸ್ತಪ್ರತಿ, ಶಾಸ್ತ್ರವನ್ನು ಒಳಪಡಿಸುವುದು ಹಾಗೂ ಕಂಪ್ಯೂಟರ್ ಬಳಕೆಯ ಸಾಧ್ಯಾಸಾಧ್ಯತೆಯನ್ನು ಇಲ್ಲಿನ ಪ್ರಬಂಧಗಳು ವಿವೇಚಿಸುತ್ತವೆ. ಈ ಕೃತಿಯು ಕಂಪ್ಯೂಟರ್ ಮತ್ತು ಕನ್ನಡಾಭಿವೃದ್ಧಿ, ಕನ್ನಡ ಭಾಷೆಯ ಕಂಪ್ಯೂಟರ್ ಸಂಸ್ಕರಣ, ಕನ್ನಡದಲ್ಲಿ ಸಾಫ್ಟ್ವೇರ್ ಅಭಿವೃದ್ಧಿ: ಕಂಪ್ಯೂಟರ್ನಲ್ಲಿ ಕನ್ನಡ , ಕಂಪ್ಯೂಟರ್ ಮೂಲಕ ಕನ್ನಡ ಹಸ್ತಪ್ರತಿಗಳ ಪುನಾರಚನೆ ಮತ್ತು ಪ್ರಸರಣ , ಕನ್ನಡ ಡಾಟಬೇಸ್ಗಳಲ್ಲಿ ಮಾಹಿತಿಯ ಅಳವಡಿಕೆ ,ಕಾವ್ಯಾಭ್ಯಾಸಕ್ಕೆ ಕಂಪ್ಯೂಟರ್ ಸಹಾಯ, ಕನ್ನಡ ಜಾನಪದ ಅಧ್ಯಯನದಲ್ಲಿ ಕಂಪ್ಯೂಟರ್ ಬಳಕೆ, ಕನ್ನಡದಲ್ಲಿ ಗಣಕ ಕ್ರಿಯೆ, ಕಂಪ್ಯೂಟರ್ಗಳೂ; ಕನ್ನಡ ಅಭಿವೃದ್ಧಿಯೂ, ಕಂಪ್ಯೂಟರ್ ಕೈಬರಹವನ್ನು ಅರ್ಥೈಸಬಲ್ಲದೆ ಮುಂತಾದ ಅಧ್ಯಾಯಗಳನ್ನು ಒಳಗೊಂಡಿದೆ.
©2024 Book Brahma Private Limited.