`ಕೋಲಾಟದ ಪದಗಳು’ ಕೃತಿಯು ಎಲ್.ಆರ್. ಹೆಗಡೆ ಅವರ ಮೂಲ ಕೃತಿಯಾಗಿದ್ದು, ರೇಣುಕಾ ರಾಮಕೃಷ್ಣ ಭಟ್ಟ ಅವರು ಸಂಪಾದಿಸಿದ್ದಾರೆ. ಜನಪದ ಗೀತೆಗಳು ಸಂಸ್ಕೃತಿಯ ಪ್ರತಿಬಿಂಬವಾಗಿ ಮೂಡಿಬಂದಿದೆ. ಗುರುವಿನ ಸಿರಿಪಾದಕೆ ಶರಣೆನ್ನಿರೊ - ಶ್ರೀ ಬುದ್ಯಾ ಗುಣನಾಯ್ಕ, ಅರಗಾ ತಾ: ಕಾರವಾರ, ವಂದು ನವಿಲಿಂದು ಕೋಲೇ - ಶ್ರೀ ಬುದ್ಯಾ ಗುಣ ನಾಯ್ಕ, ಅರಗಾ ತಾ: ಕಾರವಾರ, ವಲೊಲ್ಲೆ ಕೇದಿಗೆ - ಹುಲಿಯಾ ಗೌಡ, ಕೂಡ್ಲೆ ತಾ || ಕುಮಟಾ, ನಮೋ ನಮ, ಪರಮೇಶ್ವರಗೆ ವಲವಾದೋ (ಕೋಲಾಟ) - ಕುಪ್ಪು ಮಾರುಗೌಡ, ಕೂಜಳ್ಳಿ, ತಂದಾನ ತೈದಾನೋ - ಕುಪ್ಪ ಮಾರುಗೌಡ, ಕೂಜಳ, ಯೇ ಬಸವಾ ಬಸವನಂದಿರೇ, ಹರವಣ ಗುರುವಣ ಬಲಗೊಂಬೆ - ನಾಗಪ್ಪ ಶಿವಪ್ಪ ಗೌಡ, ತಲಗೊಡ, ದೇವತೆಗಳ ಕೋಲಾಟ, ಸುಗ್ಗಿ ಪದ - ಜಾಗಡಿ ಪದ - ಶ್ರೀ ಮಂಜು ಬಡವ ನಾಯ್ಕ, ಹೊನ್ನಾಕುಳಿ, . ತಂದಾನೋ (ಸುಗ್ಗಿ ಆಲಾಪ) (ಮೃದಂಗ ಹೊಡೆಯುವ ಆಲಾಪ), ಕೋಟೆ ಸುತ್ತಿನ ಮೇನೆ (ಆಲಾಪ), . ಸುಗ್ಗಿ ಹಬ್ಬದಲ್ಲಿ ಗೆಂಡೆಕ ಕೋಲು ಕಡ್ಕ ಬರುದು, ಸುಗ್ಗಿ ತಳನಲ್ಲಿ ಪದ (ದುಮಸೋ ಲಣ್ಣಿರಾ) - ಸಣಕೂಸ ಉಪ್ಪಾರ, ಹಳದಿಪುರ, ಹಿಮದ ಗಾಳಿ ಬೀಸುವಾಗ ಕೋಲೇ (ಸುಗ್ಗಿ ಕಟ್ಟಿಕೊಂಡು ಹೋದ ಕೂಡಲೆ ಹೇಳುವುದು)- - ಶ್ರೀ ನಾರಾಯಣ ಗೌಡ ಕಲವೇ, ಹೋಯ್ಲು, . ಅಡ್ಡಗೊಂಡ ಪದ (ಸ್ವಾಮೇರಾ ಬೂಮಿಗೊಂದು ನೆನೆಯೋ), ಸುಗ್ಗಿನಿಂತ ಮೇಲೆ ಹೇಳುವ ಪದ (ಅಂಗಳವಾರ ಆರತಿಯಾಗ್ಲಿ), . ಪಾಂಡರೂ ಕಡನ ಹೊಡೆದಾರೇ, ಶಿವರಾತ್ರಿ ದಿನದಲ್ಲಿ (ಸುಗ್ಗಿ ಕೋಲಾಟದ ಪದ) - ದೇವುಕುಪ್ಪ ಗೌಡ, ನೆಲ್ಲೆಕೇರಿ, ಮೂರೂರ, ಕಾರಿಕಾಯ ಕಡಜಲ ಕಾಯಾ, ಹೀಗೆ ಹಲವಾರು ಶೀರ್ಷಿಕಗಳುಳ್ಳ ಜನಪದ ಗೀತೆಗಳನ್ನು ಒಳಗೊಂಡಿದೆ.
©2024 Book Brahma Private Limited.