ಕರ್ನಾಟಕದ ಜನಪದ ಕಲೆಗಳ ಹೆಗ್ಗುರುತುಗಳನ್ನು ಪರಿಚಯಿಸುವ ಕೃತಿ ಕರ್ನಾಟಕ ಜನಪದ ರಂಗಭೂಮಿ. ಜನರಿಂದ ಹುಟ್ಟಿಕೊಂಡ ಜನಪದ ಕಲೆಗಳು ಕಲಾತ್ಮಕ ಅಭಿವ್ಯಕ್ತಿಯೂ ಹೌದು. ಈ ಜನಪದ ಕಲೆಗಳು ಸಮುದಾಯದ ಬದುಕಿನ ಮೌಲ್ಯಗಳನ್ನು ಒಳಗೊಂಡಿರುವ ಸಂಸ್ಕೃತಿಯ ಕುರುಹುಗಳು ಎಂದರೆ ತಪ್ಪಲ್ಲ. ಕರ್ನಾಟಕದಲ್ಲಿ ಸುಮಾರು 200ಕ್ಕೂ ಹೆಚ್ಚಿನ ಜನಪದ ಕಲೆಗಳಿವೆ. ಕೆಲವು ಕಲೆಗಳು ಆಯಾ ಪ್ರದೇಶಕ್ಕೆ ಮಾತ್ರ ಸೀಮಿತವಾಗಿವೆ. ಇತಂಹ ಜನಪದ ಕಲೆಗಳಲ್ಲಿ ಕೆಲವನ್ನು ಛಾಯಾಚಿತ್ರಗಳೊಂದಿಗೆ ಪರಿಚಯಿಸುವ ಕೆಲಸವನ್ನು ಲೇಖಕರು ಮಾಡಿದ್ದಾರೆ. ಇದು ಜನಪದ ಕಲೆಗಳನ್ನು ಪರಿಚಯಿಸುವ ಕೃತಿ ಎಂದರೆ ತಪ್ಪಾಗಲಾರದು.
©2025 Book Brahma Private Limited.