ಜನಪದ ಸಸ್ಯನಾಮಗಳ ಅಧ್ಯಯನವು ಕನ್ನಡ ಜಾನಪದ ಕ್ಷೇತ್ರಕ್ಕೆ ಹೊಚ್ಚ ಹೊಸತು ಕನ್ನೆನೆಲವಾಗಿ ಉಳಿದಿದ್ದ ಈ ಕ್ಷೇತ್ರವನ್ನು ಪ್ರವೇಶಿಸಿರುವ ಜಾನಪದ ವಿದ್ವಾಂಸರಾದ ಶ್ರೀಮತಿ ಶಾಂತನಾಯಕ ಅವರು ಸಸ್ಯನಾಮಗಳನ್ನು ಕುರಿತಾದ ಕಿರುಹೊತ್ತಿಗೆಯನ್ನು ರಚಿಸುವುದರ ಮೂಲಕ " ಅನನ್ಯವಾದ ಕೊಡುಗೆ ನೀಡಿದ್ದಾರೆ. ಸಸ್ಯಸಂಬಂಧಿ ವಿಚಾರಗಳನ್ನು ಅತ್ಯಂತ ಸರಳವಾಗಿ, ಸ್ಪಷ್ಟವಾಗಿ ಓದುಗರ ಮನ ಮುಟ್ಟುವಂತೆ ತಲುಪಿಸುವಲ್ಲಿ ಶಾಂತಿ ನಾಯಕರಿಗೆ ಭಾಷೆ ಸಿದ್ಧಿಸಿದೆ. ವಿಷಯ ಮಂಡನೆಯಲ್ಲಿ ಆಪ್ತತೆ ಇದೆ. ಜನಪದ ಸಸ್ಯನಾಮಗಳ ದಾಖಲೀಕರಣ ಮತ್ತು ಅಧ್ಯಯನದಿಂದ ಆಯುರ್ವೇದ ವಿದ್ಯಾರ್ಥಿಗಳಿಗೆ ಮತ್ತು ವೈದ್ಯರುಗಳಿಗೆ ಹೆಚ್ಚಿನ ಪ್ರಯೋಜನ ಲಭಿಸುತ್ತದೆ ಎಂಬುದರಲ್ಲಿ ಸಂದೇಹವಿಲ್ಲ ಎಂದು ಚಕ್ಕೆರೆ ಶಿವಶಂಕರ್ ಅವರು ಬೆನ್ನುಡಿಯಲ್ಲಿ ಬರೆದಿದ್ದಾರೆ.
©2024 Book Brahma Private Limited.