ಮಾನವರನ್ನು ಒಳಗೊಂಡ ಜಗತ್ತಿನ ಇಲ್ಲಾ ಜೀವಿಗಳಿಗೆ ಆಹಾರ ಬೇಕು ಎನ್ನುವ ಮಾತನ್ನು ಯಾರೂ ಅಲ್ಲಗಳೆಯುವದು ಸಾಧ್ಯವಿಲ್ಲ. ಜೀವಿಗಳ ಆರೋಗ್ಯಕ್ಕೂ ಅಹಾರಕ್ಕೂ ಹೆಚ್ಚಿನ ಸಂಬಂಧವಿರುವ ಕಾರಣ ಜೀವಿಗಳ, ಆಹಾರ, ವಿಜ್ಞಾನ ಮತ್ತು ಅಡುಗೆ ವಿಜ್ಞಾನದ ಬಗ್ಗೆ ಹೆಚ್ಚಿನ ಅಧ್ಯಯನ ವಿಶ್ಲೇಷಣೆಗಳು ನಡೆಯಬೇಕಾದದ್ದು ಅಷ್ಟೇ ಅವಶ್ಯವಾಗಿದೆ. ಅಧುನಿಕ ಕಾಲದ ಆಹಾರ ವಿಜ್ಞಾನ ಕ್ಷೇತ್ರದಲ್ಲ ಈ ಕೆಲಸ ತಕ್ಕಮಟ್ಟಿಗೆ ನಡೆಯುತ್ತಿದೆ ಎಂಬುದು ನೆಮ್ಮದಿಯ ಸಂಗತಿ. ಆಧುನಿಕ ವೈದ್ಯಕೀಯ ಭಾಷೆಯಲ್ಲಿ ಪೂರ್ಣ ಆಹಾರ, ಪೌಷ್ಠಿಕ ಆಹಾರ, ಪಿಷ್ಟ ಸಕ್ಕರೆ, ಕೊಬ್ಬು, ಸಸಾರಜನಕ, ಖನಿಜಗಳು, ನೀರು, ಆಹಾರದ ಘಟಕಗಳು, ಜೀವಸತ್ವಗಳು, ಲವಣಾದಿಗಳ ಆಯುರ್ವೇದ ಶಾಸ್ತ್ರಕಾರರ, ರಸಗುಣಾದಿಗಳ ಬಗ್ಗೆ ಈ ಸಂಗ್ರಹದಲ್ಲಿ ವಿಶೇಷವಾಗಿ ಚರ್ಚಿಸಿಲ್ಲ. 'ಆಯಸ್ಸು ಸ್ಮರಣಶಕ್ತಿ, ಅನುಮತಿಸಿದರೆ ಇನ್ನಷ್ಟು ಕ್ಷೇತ್ರ ಕಾರ್ಯ ಮಾಡಿ ಆ ಬಗ್ಗೆಯೂ ಬರೆಯಬೇಕು. ಆ ಬಗ್ಗೆ ಹೆಚ್ಚಿನ ಅಧ್ಯಯನಗಳು ನಡೆಯಲು ಈ ನನ್ನ ಲೇಖನಗಳು ಪ್ರೇರಣ ನೀಡಲಿ ಎಂದು ಹಾರೈಸುತ್ತೇನೆ ಎಂದು ಶಾಂತಿ ನಾಯಕ ಬೆನ್ನುಡಿಯಲ್ಲಿ ಬರೆದಿದ್ದಾರೆ.
©2025 Book Brahma Private Limited.