ಲೇಖಕ ಪಿ. ಆರಡಿಮಲ್ಲಯ್ಯ ಕಟ್ಟೇರ ಅವರ ಕೃತಿ-ಸೈಂಧವ ಸಂಕಥನ. ಕರ್ನಾಟಕದ ಪ್ರಸಿದ್ದ ಜನಪದ ಕಲೆ-ಬಯಲಾಟದ ಮೇಲೆ ಬೆಳಕು ಚೆಲ್ಲುವ ಪ್ರಯತ್ನವಿದು. ಬಯಲಾಟ ಸಂಕಥನದ ಹಿನ್ನೆಲೆಯಾಗಿ ಆರ್ಯ-ದ್ರಾವಿಡ ಸಂಘರ್ಷವನ್ನು ವಿಮರ್ಶಿಸಿದ್ದಾರೆ ಬಯಲಾಟಗಳನ್ನು ಲೇಖಕರು ಸಾಂಪ್ರದಾಯಿಕ ಮಾರ್ಗಗಳನ್ನು ಅನುಸರಿಸಿಲ್ಲ. ಬದಲಾಗಿ, ಬಯಲಾಟ ಅಧ್ಯಯನಗಳ ಭಾಷಿಕ ಗಡಿರೇಖೆಗಳನ್ನು ಗಮನಿಸಿದ್ದಾರೆ. ಆ ಅಧ್ಯಯನಕ್ಕೊಂದು ಬಲವಾದ ತಾತ್ವಿಕ ಚೌಕಟ್ಟನ್ನು ನೀಡಲು ಯತ್ನಿಸಿದ್ದಾರೆ
ಕೆನಡಾದ ಅಲ್ಸರ್ಟಾ ವಿಶ್ವವಿದ್ಯಾಲಯದ ಶಶಿಕುಮಾರ್ ‘ಫ್ರೆಂಚ್ ತತ್ವಜ್ಞಾನಿ ಮಿಶೆಲ್ ಫ್ರಕೊ ಪ್ರಕಾರ, ಸಂಕಥನ ಎಂಬುದು ಜ್ಞಾನ ಹಾಗೂ ಅರ್ಥವನ್ನು ಉತ್ಪಾದಿಸುವ, ಚಾರಿತ್ರಿಕವಾಗಿ ಅನಿಶ್ಚಿತವಾಗಿರುವ ಸಾಮಾಜಿಕ ವ್ಯವಸ್ಥೆಯನ್ನು ಸೂಚಿಸುವ ಪರಿಭಾಷೆ. ಮಾನವ ಶಾಸ್ತ್ರೀಯ ಸಂಶೋಧನಾ ವಿಧಾನವು ಕನ್ನಡ ಸಂಶೋಧಕರನ್ನು ಆಕರ್ಷಿಸಿದ್ದು ವಿರಳಾತಿವಿರಳ. ಹೊಸ ಸಹಸ್ರಮಾನದಲ್ಲಿ ಇಂತಹ ಸಾಹಸಕ್ಕೆ ಕೈ ಹಾಕಿರುವ ಲೇಖಕರು ಅಭಿನಂದನಾರ್ಹರು’ ಎಂದು ಪ್ರಶಂಸಿಸಿದ್ದರೆ, ಸಾಹಿತಿ ಪ್ರೊ. ಪುರುಷೋತ್ತಮ ಬಿಳಿಮಲೆ ಅವರು ‘ಈ ಕೃತಿಯ ಮೂಲಕ ಲೇಖಕರು ಬಹುಸಂಸ್ಕೃತಿಯ ಲೋಕದೃಷ್ಟಿಯ ಬಹುತ್ವವನ್ನು ಸ್ಥಾಪಿಸಬಯಸಿದ್ದಾರೆ. ನಮ್ಮ ಅರಿವಿನ ವಲಯಗಳನ್ನು ವಿಸ್ತರಿಸುವ ಪ್ರಯತ್ನವಿದು. ತಿಳಿವಳಿಕೆಯ ಸೀಮಿತ ಚೌಕಟ್ಟು ಒಡೆಯುವ ಪ್ರಯತ್ನವೂ ಹೌದು. ನಿರ್ವಸಾಹತೀಕರಣದತ್ತ ಹಾಕುವ ಹೆಜ್ಜೆಯೂ ಹೌದು’ ಎಂದು ಅಭಿಪ್ರಾಯಪಟ್ಟಿದ್ದಾರೆ.
©2024 Book Brahma Private Limited.