'ಜಾಣಿ ಕನ್ನಡವ ತಿಳಿದ್ಹೇಳೇ' ಈ ಗ್ರಂಥದಲ್ಲಿಯ ಪ್ರಸ್ತುತ ಅಧ್ಯಯನ ವಿಷಯವು ಒಗಟು ಸಂವಾದ ಕ್ರೀಡೆಗಷ್ಟೇ ಮೀಸಲಾದುದಲ್ಲ. ಇದು ಮೇಲೆ ತಿಳಿಸಿದಂತೆ ಸಾಹಿತ್ಯಾತ್ಮಕ ವಿಷಯದ ಅಧ್ಯಯನಕ್ಕೆ ಮೀಸಲಾಗಿದೆಯೆಂಬುದನ್ನು ಇನ್ನೊಮ್ಮೆ ಒತ್ತಿ ಹೇಳಬಯಸುತ್ತೇನೆ. ಇಲ್ಲಿ ಬೌದ್ಧಿಕ ಕ್ರೀಡೆ ಗೌಣವಾಗಿರುತ್ತದೆ. ಗಮನಿಸಿ, ಪ್ರಶೋತ್ತರ ರೂಪದಲ್ಲಿ ಜೊತೆ ಜೊತೆಗಿರುವ ಹಾಡಿನ ರೂಪದ ಒಗಟು ಸಂವಾದವು ಜೋಡಿ ಹಕ್ಕಿಗಳ ಹಾಡಿನಂತೆ ಹೃದಯ ಸಂಗಮವಾಗಿರುತ್ತದೆ. ಈಗಿನ ಮತ್ತು ಹಿಂದಿನ ಆವೃತ್ತಿಗಳಲ್ಲಿ ಇಲ್ಲಿಯ ಒಗಟು ಒಗಟ್ಯಗಳನ್ನು ಶಿಷ್ಟ ಕನ್ನಡಕ್ಕೆ ಪರಿವರ್ತಿಸಿ ಮುದ್ರಿಸಿರುವ ಹಾಗೂ ಟಿಪ್ಪಣಿಗಳನ್ನು ಸೇರಿಸಿರುವ ಕಾರಣ ಶಬ್ಧಕೋಶದ ಅಗತ್ಯ ಬರಲಾರದು ಎಂದುಕೊಂಡಿದ್ದೇನೆ. ಪಾರಂಪರಿಕ ವರ್ಣಮಾಲೆಯಲ್ಲಿ ಸೇರಿಲ್ಲದ ಕೆಲವು ಸ್ವರಗಳು ಪ್ರಾದೇಶಿಕ ಭಾಷೆಯಲ್ಲಿ ಕಂಡುಬರುತ್ತವೆ. ಇಲ್ಲಿಯ ಒಗಟು ಸಾಹಿತ್ಯದಲ್ಲಿಯೂ ಇಂತಹ ಸ್ವರಗಳು ಪಾತ್ರವಹಿಸಿವೆ. ಆದ್ದರಿಂದ ಈ ಹಿಂದಿನ ಮೊದಲ ಆವೃತ್ತಿಯಲ್ಲಿ ಈ ಸ್ವರಗಳನ್ನು ಸೇರಿಸಿಕೊಂಡು ಶಬ್ದಕೋಶವನ್ನು ಸಿದ್ಧಪಡಿಸಿ ಪ್ರಕಟಿಸಿದ್ದುಂಟು. ಆದರೆ ಒಗಟು ಸಂವಾದವನ್ನು ಶಿಷ್ಟ ಕನ್ನಡಕ್ಕೆ ಪರಿವರ್ತಿಸಿದ ಕಾರಣ ಇಂತಹ ಶಬ್ದಕೋಶದ ಅಗತ್ಯವು ಇಲ್ಲವೆಂದುಕೊಂಡಿದ್ದೇನೆ ಎಂದು ಶಾಂತಿ ನಾಯಕ ಅವರು ಬೆನ್ನುಡಿಯಲ್ಲಿ ಬರೆದಿದ್ದಾರೆ.
©2024 Book Brahma Private Limited.