‘ಚಿತ್ರದುರ್ಗ ಜಿಲ್ಲೆಯ ಜನಪದ ಕಲಾವಿದರು’ ಕೃತಿಯು ಯಣ್ಣೆಕಟ್ಟೆ ಚಿಕ್ಕಣ್ಣ ಅವರ ವ್ಯಕ್ತಿಚಿತ್ರಣ ಕುರಿತ ಸಂಕಲನವಾಗಿದೆ. ಇಲ್ಲಿ ಭಿನ್ನ ಭಿನ್ನ ವ್ಯಕ್ತಿತ್ವಗಳ, ಕಲೆಗಳ ಪರಿಚಯವನ್ನು ಮಾಡಲಾಗಿದೆ. ಅವರ ಸಾಧನೆ ಹಾಗೂ ಅವರು ಬದುಕಿದ ರೀತಿಯನ್ನು ತಿಳಿಸಲಾಗಿದೆ. ಇನ್ನು ಇಲ್ಲಿ ತೋಪಮ್ಮ ಎನ್ನುವ ಚಿತ್ರದುರ್ಗ ಜಿಲ್ಲೆಯ ಜನಪ್ರಿಯ ಹಾಡುಗಾರ್ತಿ ಕುರಿತ ವಿಚಾರಗಳನ್ನು ಕಾಣಬಹುದು. ಇವರು ಕಾಡುಗೊಲ್ಲರ ಸಮಗ್ರ ಸಂಸ್ಕೃತಿಯನ್ನು ಹಾಡುಗಳ ಮೂಲಕ ವಿದ್ವಾಂಸ ವಲಯಕ್ಕೆ ತೆರೆದಿಟ್ಟ ಮೊದಲ ಹಾಡುಗಾರ್ತಿ. 1930ರಲ್ಲಿ ಹುಟ್ಟಿದ ಈಕೆಯದು ಹಿರಿಯೂರು ತಾಲ್ಲೂಕಿನ ಬಿದರಕೆರೆ ಗ್ರಾಮ. ಅನಕ್ಷರಸ್ತೆಯಾದರೂ ಈಕೆಯ ಕಲ್ಪನೆ, ನೆನಪಿನ ಶಕ್ತಿ ಅಗಾಧವಾದುದು ಎನ್ನುತ್ತದೆ ಈ ಕೃತಿ.
©2025 Book Brahma Private Limited.