ಜಾನಪದ ಒಂದು ಅಧ್ಯಯನ ಶಿಸ್ತಾಗಿ ರೂಪಗೊಂಡ ಮೇಲೆ ಅನೇಕ ಜಾನಪದ ಆಸಕ್ತರು ಕನ್ನಡದಲ್ಲಿ ಜಾನಪದ ಸಂಬಂಧೀ ಕೃತಿಗಳನ್ನು ರಚಿಸಿ, ಪ್ರಕಟಿಸಿರುವುದು ಸಂತಸದ ಸಂಗತಿ. ಜಾನಪದ ವಿಷಯಾಸಕ್ತಿ ಆರಂಭಿಕ ದಶಕಗಳಿಗಿಂತ ಇಂದು ಹೆಚ್ಚಾಗಿದೆ. ಅದಕ್ಕೆ ಪ್ರಕಟಗೊಂಡ ಕೃತಿಗಳ ಶೀರ್ಷಿಕೆ ಹಾಗೂ ಆಯ್ದುಕೊಂಡ ವಿಷಯಗಳೇ ಸಾಕ್ಷಿ ಒದಗಿಸಿದೆ. ಜಾನಪದವನ್ನು ಒಂದು ಅಧ್ಯಯನ ಶಿಸ್ತನ್ನಾಗಿ ರೂಪಿಸಲು ಹಾ.ಮಾ. ನಾಯಕ, ದೇಜೇಗೌ, ಜೀಶಂಪ ಇನ್ನೂ ಮುಂತಾದವರ ಶ್ರಮವನ್ನು ಮರೆಯಲು ಸಾಧ್ಯವಿಲ್ಲ. ಪ್ರಸ್ತುತ ಕೃತಿಯ ಲೇಖಕಿಯಾದ ಶ್ರೀಮತಿ ಶಾಂತಿ ನಾಯಕ ಅವರಿಗೆ ಜಾನಪದ ಕ್ಷೇತ್ರದ ಪೂರ್ವಸೂರಿಗಳ ಬರಹ ಹಾಗೂ ಜೀವನ ಕ್ರಮಗಳ ಅರಿವಿದೆ. ಲಿಖಿತ ಮಾಹಿತಿಯ ಬೆಳಕು ಹಾಗೂ ಕ್ಷೇತ್ರಾಧಾರಿತ ಮಾಹಿತಿಗಳ ಸಮಪಾತಳಿಯಲ್ಲಿ ಮೂಡಿ ಬಂದು ಈ ಕೃಷಿ ಉತ್ತರ ಕನ್ನಡದ ಸಾಂಸ್ಕೃತಿಕ ಒಳಬದುಕನ್ನು ಪ್ರತಿಫಲಿಸಿದೆ ಎಂದು ಪ್ರೊ. ಸ.ಚಿ.ರಮೇಶ್ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
©2024 Book Brahma Private Limited.