ಡಾ. ಶಿವರಾಮ ಕಾರಂತರು 1963ರಲ್ಲಿ ಬರೆದ ಕೃತಿ-ಕರ್ನಾಟಕದ ಜಾನಪದ ಕಲೆಗಳು. ಈ ಕಲೆಗಳು ಜಾನಪದ ಸಾಹಿತ್ಯದ ಪ್ರಮುಖ ಜೀವಾಳವಾಗಿವೆ. ಜಾನಪದೀಯ ಕಲೆಗಳ ಹೆಸರಿನ ಪಟ್ಟಿ ನೆನಪಿನಲ್ಲಿ ಇಟ್ಟುಕೊಳ್ಳಲಾರದಷ್ಟು ಸಂಖ್ಯೆಯಲ್ಲಿ ಲೇಖಕ ಕಾರಂತರು ತಮ್ಮ ಕೃತಿಯಲ್ಲಿ ಕಲೆಗಳ ಬಗ್ಗೆ ವಿವರ ಮಾಹಿತಿ ನೀಡಿದ್ದಾರೆ. ಜಾನಪದ ಕಲೆಗಳ ಭಂಡಾರವನ್ನೇ ಅಚ್ಚುಕಟ್ಟಾಗಿ ಇರಿಸಿದ್ದಾರೆ. ಅಳಿವಿನ ಅಂಚಿನಲ್ಲಿರುವ ಜಾನಪದ ಕಲೆಗಳು ಹಾಗೂ ಆ ಕುರಿತ ಸಾಹಿತ್ಯದ ರಕ್ಷಣೆ ಹಾಗೂ ಪ್ರೋತ್ಸಾಹದ ಅಗತ್ಯವನ್ನು ಈ ಕೃತಿ ಪ್ರತಿಪಾದಿಸುತ್ತದೆ.
ಉತ್ತರ ಪ್ರದೇಶದ ಲಕ್ನೋ ಮೂಲದ ಲಕ್ನೋ ಲಿಟರಸಿ ಹೌಸ್ ಸಂಸ್ಥೆಯು 1961ರಲ್ಲಿ (ಪುಟ: 25) ಈ ಕೃತಿಯನ್ನು ಮೊದಲ ಬಾರಿಗೆ ಪ್ರಕಟಿಸಿತ್ತು.
©2025 Book Brahma Private Limited.