‘ಜಾನಪದ ಆಯಾಮಗಳು’ ಡಾ. ಬಸವರಾಜ ಸಬರದ ಅವರು ರಚಿಸಿರುವ ಕಿರು ಹೊತ್ತಿಗೆ. ಕನ್ನಡ ವಿಶ್ವವಿದ್ಯಾಲಯವು ಕನ್ನಡದ ಹತ್ತಾರು ಕ್ಷೇತ್ರಗಳಿಗೆ ಸಂಬಂಧಿಸಿದ ಪ್ರಮುಖ ವಿಷಯಗಳನ್ನು ಕುರಿತು ಸಾಮಾನ್ಯ ಓದುಗರಿಗೆ ಅರಿವನ್ನು ನೀಡಲು ಮಂಟಪಮಾಲೆಯಲ್ಲಿ ಕಿರು ಪುಸ್ತಕಗಳನ್ನು ಪ್ರಕಟಿಸಿತ್ತು ಆ ಮಾಲೆಯಲ್ಲಿ ಜಾನಪದ ಆಯಾಮಗಳು ಎಂಬ ಈ ಕಿರುಹೊತ್ತಿಗೆಯೂ ಪ್ರಕಟವಾಗಿದೆ. ಈ ಕೃತಿಯಲ್ಲಿ ಹಿನ್ನೆಲೆ, ಪರಿಸರ ಸಂಬಂಧಿ ಜಾನಪದ, ದೈವ ಸಂಬಂಧಿ ಜಾನಪದ, ಸಾಂಸ್ಕೃತಿಕ ಜಾನಪದ, ಜೈವಿಕ ಜಾನಪದ, ಕೃಷಿ ಜಾನಪದ, ಜನಾಂಗಿಕ ಜಾನಪದ, ಅನ್ವಯಿಕ ಜಾನಪದ ಹಾಗೂ ಸಮಾರೋಪ ಲೇಖನಗಳು ಸಂಕಲನಗೊಂಡಿವೆ
©2024 Book Brahma Private Limited.