‘ಹಾಸನ ಜಿಲ್ಲೆಯ ಕಲಾವಿದರು’ ಕೃತಿಯು ಹಂಪನಹಳ್ಳಿ ತಿಮ್ಮೇಗೌಡ ಅವರ ವ್ಯಕ್ತಿಚಿತ್ರಣ ಕೃತಿಯಾಗಿದೆ. ಸಾಂಸ್ಕೃತಿಕ ರಾಯಭಾರಿಗಳು, ಸಮಾಜಕ್ಕೆ ಗುರುವಾಗಿ ಶತಮಾನಗಳನ್ನು ಕಂಡವರು; ಕಾಣಿಸಿದವರು. ಅಕ್ಷರದ ಅರಿವಿಲ್ಲದಿದ್ದರೂ ವಿಶ್ವವಿದ್ಯಾನಿಲಯದಲ್ಲಿ ಕಲಿತವರಿಗಿಂತ ಹೆಚ್ಚು ಸಮರ್ಪಕವಾಗಿ ಸಾಂಸ್ಕೃತಿಕ ಜ್ಞಾನ ಸಂಪತ್ತನ್ನು ಹೊಂದಿದ್ದು ಅದನ್ನು ಪ್ರಸಾರ ಮಾಡಿದ ಅಭಿಜ್ಞರ ಕುರಿತು ಈ ಕೃತಿ ಮಾತನಾಡುತ್ತದೆ. ಹಾಸನ ನಗರದ ಸೈಯದ್ ಇಸಾಕ್ ತಂದೆ ಸೈಯದ್ ಇಮಾಮ್ ತಾಯಿ ಫಾತಿಮಾ. ಇವರು ಈಗಿಲ್ಲ. ಈಗ ಬದುಕಿದ್ದರೆ ಇವರಿಗೆ ಸುಮಾರು ನೂರಹತ್ತು ವರ್ಷಗಳಷ್ಟಾಗುತ್ತಿತ್ತು. ಇವರು ಯಕ್ಷಗಾನ ಮೇಳಗಳನ್ನು ಕಲಿಸುವುದರೊಂದಿಗೆ ವೇಷವನ್ನು ಕೂಡ ಹಾಕಿದವರು. ಇವರು ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಯಕ್ಷಗಾನ ಕಲೆಗೆ ಮನಸೋತವರು ಎನ್ನುವ ವಿಚಾರವನ್ನು ಇಲ್ಲಿ ತಿಳಿಸಲಾಗಿದೆ.
©2024 Book Brahma Private Limited.