ನಾಗಾರ್ಜುನ ಮೂಲಮಧ್ಯಮಕಕಾರಿಕಾ

Author : ಎಸ್. ನಟರಾಜ ಬೂದಾಳು

Pages 220

₹ 150.00




Published by: ಗೋಧೂಳಿ ಪ್ರಕಾಶನ
Address: ನಂ.35, ಗೋಧೂಳಿ, 5ನೆ ಅಡ್ಡರಸ್ತೆ, ಸಿಂಡಿಕೇಟ್ ಬಡಾವಣೆ, ತುಂಗಾನಗರ, ಬೆಂಗಳೂರು-91

Synopsys

ಬೌದ್ಧ ತಾತ್ವಿಕತೆಯನ್ನು ವಿವರಿಸಿಕೊಟ್ಟ ಗುರು ನಾಗಾರ್ಜುನನನ್ನು ಎರಡನೆಯ ಬೌದ್ಧ ಎಂದು ಕರೆದು ಗೌರವಿಸಲಾಗಿದೆ. ಬುದ್ಧ ಗುರುವಿನ ತಾತ್ವಿಕತೆಯನ್ನಾಧರಿಸಿ ಬೌದ್ಧ ಮಹಾಯಾನವನ್ನು ಪ್ರವರ್ತಿಸಿದವನು ನಾಗಾರ್ಜುನ. ಕ್ರಿ.ಶ. ಎರಡನೆಯ ಶತಮಾನದವನಾದ ನಾಗಾರ್ಜುನ ಬನವಾಸಿಯ ಬಳ್ಳಿಗಾವೆಯ ನಾಡಿನವನು. ನಂತರ ನಲಂದಾ ವಿಶ್ವವಿದ್ಯಾಲಯ ಅವನ ಕಾರ್ಯಕ್ಷೇತ್ರವಾಗಿತ್ತು. ಕೊನೆಯ ದಿನಗಳನ್ನು ಶ್ರೀಶೈಲದಲ್ಲಿ ಕಳೆದ ಎಂದು ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ. ನಾಗಾರ್ಜುನನ ಮಹತ್ವದ ಕೃತಿಯಾದ ‘ಮೂಲಮಧ್ಯಮಕಕಾರಿಕಾ’ ತರ್ಕ ಮಾರ್ಗದ ಕೃತಿ. ಈ ಕೃತಿಯಲ್ಲಿ ಒಟ್ಟು 448 ಕಾರಿಕೆಗಳೂ 27 ಅಧ್ಯಾಯಗಳೂ ಇವೆ. ಮೂಲಮಧ್ಯಮಕಾರಿಕಾದಲ್ಲಿ ಪ್ರಸ್ತಾಪಿತವಾಗಿರುವ ತಾತ್ವಿಕತೆಯ ಮೂಲ ಆಕರವೆಂದರೆ ತ್ರಿಪಿಟಗಳಲ್ಲಿರುವ ಬುದ್ಧ ನಡೆಸಿದ ಸಂವಾದಗಳು. ಅದನ್ನು ಪದೇ ಪದೇ ಸ್ಮರಿಸುವ ನಾಗಾರ್ಜುನ ತಾನು ಬುದ್ಧನ ತಾತ್ವಿಕತೆಗೆ ತೀರಾ ಹತ್ತಿರದಲ್ಲಿದ್ದೇನೆಂದು ಖಾತರಿ ಪಡಿಸುತ್ತಾನೆ. ಮೂಲಮಧ್ಯಮಕಕಾರಿಕಾ ಪಠ್ಯವನ್ನು ಕನ್ನಡದ ಓದುಗರಿಗೆ ಅರ್ಥವಾಗುವ ಹಾಗೆ ಸರಳವಾದ ಶೈಲಿಯಲ್ಲಿ ಅನುವಾದಿಸಲಾಗಿದೆ. ವಿವರವಾದ ಪ್ರಸ್ತಾವನೆಯು ನಾಗಾರ್ಜುನನ ತಾತ್ವಿಕ ಜಿಜ್ಞಾಸೆ ಮತ್ತು ಈ ಪಠ್ಯದ ಮಹತ್ವ ಮತ್ತು ಅರ್ಥ ಮಾಡಿಕೊಳ್ಳುವುದಕ್ಕೆ ಪೂರಕವಾಗಿದೆ. ತಾತ್ವಿಕ ಜಿಜ್ಞಾಸೆಯಲ್ಲಿ ಆಸಕ್ತರಾದವರಿಗೆ ತುಂಬಾ ಮಹತ್ವದ ಗ್ರಂಥವಿದು.

About the Author

ಎಸ್. ನಟರಾಜ ಬೂದಾಳು

ತುಮಕೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ನಟರಾಜ ಬೂದಾಳು ಅವರು ಕನ್ನಡದ ಸಂಸ್ಕೃತಿ ಚಿಂತಕ-ಸಂಶೋಧಕರಲ್ಲಿ ಒಬ್ಬರು. ಬುದ್ಧಚಿಂತನೆಯನ್ನು ಹರಳುಗೊಳಿಸಿದ ನಾಗಾರ್ಜುನನ ಮೂಲಮಧ್ಯಮಕಾರಿಕಾವನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿರುವ ಬೂದಾಳು ಅವರು ಕರ್ನಾಟಕದ ಸಂಸ್ಕೃತಿ ರೂಪಿಸುವಲ್ಲಿ  ಶ್ರಮಣ ಧಾರೆಗಳು ವಹಿಸಿದ ಪ್ರಮುಖ ಪಾತ್ರಗಳ ಬಗ್ಗೆ ವಿಶೇಷ ಒಲವು ಉಳ್ಳವರು. ಕರ್ನಾಟಕ ಸರ್ಕಾರ ಪ್ರಕಟಿಸಿದ ಸಮಗ್ರ ತತ್ವಪದ ಸಾಹಿತ್ಯ ಯೋಜನೆಯ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿರುವ ಅವರು ಕನ್ನಡ ಸಾಹಿತ್ಯ ಮೀಮಾಂಸೆಯ ಕುರಿತು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. 2020 ನೇ ಸಾಲಿನ ಕೇಂದ್ರ ಸಾಹಿತ್ಯ ಅನುವಾದ ಕೃತಿಗೆ ಕೊಡಮಾಡುವ ...

READ MORE

Related Books