ಶಂಕರಾನಂದಯೋಗಿ ಮತ್ತು ಇತರ ತತ್ವಪದಕಾರರ ವಾಚಿಕೆ

Author : ಎಸ್. ನಟರಾಜ ಬೂದಾಳು

Pages 235

₹ 150.00




Year of Publication: 2019
Published by: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ,ಮಲ್ಲತ್ತಹಳ್ಳಿ, ಬೆಂಗಳೂರು - 560056
Phone: 080 - 23183311, 23183312

Synopsys

ಶಂಕರಾನಂದಯೋಗಿ ಮತ್ತು ಇತರ ತತ್ವಪದಕಾರರ ವಾಚಿಕೆ-ಕೃತಿಯು ಎಸ್. ನಟರಾಜ ಬೂದಾಳು ಅವರ ಸಂಪಾದಿತ ಕೃತಿ. ಕನ್ನಡದ ಜನಮಾನಸವನ್ನು ತುಂಬಿಕೊಂಡಿರುವ ಇಬ್ಬರು ಕವಿಗಳೆಂದರೆ ಚಿದಾನಂದಾವಧೂತ ಮತ್ತು ಶಂಕರಾನಂದಯೋಗಿ. ಮಹಾಕವಿಯಾದ ಚಿದಾನಂದಾವಧೂತನ ದೇವಿಮಹಾತ್ಮೆ ಈವರೆಗೆ ಕನ್ನಡದಲ್ಲಿ ಅತ್ಯಂತ ಹೆಚ್ಚು ಮುದ್ರಣಗಳನ್ನು ಕಂಡ ಮಹಾಕಾವ್ಯ. ಇದಕ್ಕಿಂತ ಹೆಚ್ಚು ಜನರಿಂದ ಈ ಹೊತ್ತಿನವರೆಗೆ ಓದಿಸಿಕೊಳ್ಳುತ್ತಿರುವ ಕನ್ನಡದ ಕಾವ್ಯವೆಂದರೆ ಶನಿಮಹಾತ್ಮೆ. ಈವರೆಗೆ ಅತ್ಯಂತ ಹೆಚ್ಚು ಜನರಿಂದ ಹಾಡಿಸಿಕೊಳ್ಳುತ್ತಿರುವ ಮತ್ತು ಆಚರಣೆಗೊಳ್ಳುತ್ತಿರುವ ಕವಿಯೆಂದರೆ ಶಂಕರಾನಂದಯೋಗಿ. ಉತ್ತರ ಕರ್ನಾಟಕದ ಪಾಲಿಗೆ ಈ ಜಾಗವನ್ನು ತುಂಬಿರುವವನೆಂದರೆ ಕಡಕೋಳ ಮಡಿವಾಳಪ್ಪ. ಈ ಮಾಹಿತಿ ಕನ್ನಡದ ಓದುಗ ವಲಯಕ್ಕೆ ಆಶ್ಚರ್ಯದ ಸಂಗತಿ ಎನ್ನಿಸಬಹುದು. ಇವೆಲ್ಲ ಇಷ್ಟು ಪ್ರಚಲಿತದಲ್ಲಿದ್ದರೂ ಶೈಕ್ಷಣಿಕ ಓದುಗ ವಲಯದಿಂದ ಏಕೆ ದೂರ ಇವೆ? ಈ ಪ್ರಶ್ನೆಗೆ ಒಂದೇ ಉತ್ತರವೆಂದರೆ ಇವು ತಾವಾಗಿ ದೂರ ಇಲ್ಲ; ಬದಲಿಗೆ ದೂರ ಇಡಲಾಗಿದೆ.

ಗಮನಿಸಬೇಕಾದ ಸಂಗತಿ ಎಂದರೆ ಇವೆಲ್ಲ ಕೇವಲ ಓದು/ಹಾಡು ಪಠ್ಯಗಳಲ್ಲ; ಬದಲಿಗೆ ಸಾಧಕ ಪಠ್ಯಗಳು. ಈ ನೆಲದ ಬಯಲುಸೀಮೆಯ ಪ್ರಮುಖ ತತ್ವಪದಕಾರ ಶಂಕರಾನಂದಯೋಗಿ ಮತ್ತು ಇತರ ತತ್ವಪದಕಾರರ ಆಯ್ದ ತತ್ವಪದಗಳ ಸಂಕಲನ ಈ ವಾಚಿಕೆ. ಶಂಕರಾನಂದ ಯೋಗಿಯ ಕೈವಲ್ಯ ನವನೀತ ಕೃತಿ ಟಿ ಎನ್ ಕೃಷ್ಣಯ್ಯಶೆಟ್ಟರಿಂದ ನೂರಾರು ಬಾರಿ ಪ್ರಕಟಗೊಂಡಿರಬಹುದು. ಇನ್ನು ಶಂಕರಾರ್ಯರ ‘ಶಂಕರಾನಂದ ತತ್ವ ಮತ್ತು ಪದ್ಧತಿ’ ಕೃತಿಗೆ ಹೊದಿಸಿರುವ ಮೇಲುಹೊದಿಕೆಗೆ ನನಗಿಂತ ಹೆಚ್ಚು ವಯಸ್ಸಾಗಿರುವುದನ್ನು ಅನೇಕ ಕಡೆ ಕಂಡಿದ್ದೇನೆ ಎನ್ನತ್ತಾರೆ ಲೇಖಕರು.

ಈ ಮಹಾನ್ ಸಾಧಕರ ‘ಜನಪ್ರಿಯ’ ತತ್ವಗಳನ್ನು ಆಯ್ಕೆ ಮಾಡಿ ಈ ವಾಚಿಕೆಯಲ್ಲಿ ಕೊಡಲಾಗಿದೆ. ಇವುಗಳ ಬಿಡಿ ಬಿಡಿ ಪ್ರಕಟಣೆಗಳನ್ನು ತಮ್ಮ ಬಟ್ಟೆಯ ಬ್ಯಾಗಿನಿಂದ ತೆಗೆದು ಹಾಡುವ ಅವರಿಗೆ ಈ ಸಂಕಲವನ್ನು ಅರ್ಪಿಸಿದಾಗ ಆದ ಸಾರ್ಥಕತೆಗೆ ಸಮನಿಲ್ಲ. ಬಿಡು ಬಿಡಿನ್ಯಾತರ ಜ್ಞಾನ | ನಿನ್ನ ನಡೆನುಡಿ ಒಂದಾಗದಿಹುದೆ ಅಜ್ಞಾನ || ಇಂತಹ ತತ್ವಗಳನ್ನು ಬರೀ ಓದಬಾರದು. ಏಕತಾರಿ ಹಿಡಿದು ಹಾಡಬೇಕು ಇಲ್ಲ ಧ್ಯಾನಸ್ಥನಾಗಿ ಕೇಳಬೇಕು. ---

About the Author

ಎಸ್. ನಟರಾಜ ಬೂದಾಳು

ತುಮಕೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ನಟರಾಜ ಬೂದಾಳು ಅವರು ಕನ್ನಡದ ಸಂಸ್ಕೃತಿ ಚಿಂತಕ-ಸಂಶೋಧಕರಲ್ಲಿ ಒಬ್ಬರು. ಬುದ್ಧಚಿಂತನೆಯನ್ನು ಹರಳುಗೊಳಿಸಿದ ನಾಗಾರ್ಜುನನ ಮೂಲಮಧ್ಯಮಕಾರಿಕಾವನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿರುವ ಬೂದಾಳು ಅವರು ಕರ್ನಾಟಕದ ಸಂಸ್ಕೃತಿ ರೂಪಿಸುವಲ್ಲಿ  ಶ್ರಮಣ ಧಾರೆಗಳು ವಹಿಸಿದ ಪ್ರಮುಖ ಪಾತ್ರಗಳ ಬಗ್ಗೆ ವಿಶೇಷ ಒಲವು ಉಳ್ಳವರು. ಕರ್ನಾಟಕ ಸರ್ಕಾರ ಪ್ರಕಟಿಸಿದ ಸಮಗ್ರ ತತ್ವಪದ ಸಾಹಿತ್ಯ ಯೋಜನೆಯ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿರುವ ಅವರು ಕನ್ನಡ ಸಾಹಿತ್ಯ ಮೀಮಾಂಸೆಯ ಕುರಿತು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. 2020 ನೇ ಸಾಲಿನ ಕೇಂದ್ರ ಸಾಹಿತ್ಯ ಅನುವಾದ ಕೃತಿಗೆ ಕೊಡಮಾಡುವ ...

READ MORE

Excerpt / E-Books

ಜಾತಿ ಸೂತಕವೆಂಬ ಮಾತಿಲ್ಲ | ಜಾತಿ ಸೂತಕವೆಂಬ ಮಾತಿಲ್ಲ | ಸುಜ್ಞಾನ ಮಾರ್ಗದಿ | ಜಾತಿಕರ್ಮಾದಿಗಳು ಮೊದಲಿಲ್ಲ ||ಜಾತಿ|| || ಪ || ಜಾತಿಗೋತ್ರಕೆ ಬದ್ಧರಾಗುತ | ಆತ್ಮನರಿಯದ ಕರ್ಮಿಗಲ್ಲದೆ | ಜಾತಿ ಕಲ್ಪನೆಯಳಿದು ಆತ್ಮ | ಜ್ಯೋತಿಯಲಿ ಮುಳುಗಿದ ಮಹಾತ್ಮಗೆ ||ಜಾತಿ|| || ಅ.ಪ || (ಶಂಕರಾನಂದಯೋಗಿ) ನೋಡಿದೇನೆ ಪ್ರೌಢ ಸುಂದರೀ ನೋಡಿದೇನೆ ಪ್ರೌಢ ಸುಂದರೀ | ಆ | ಜಾಡ ತಿಳಿದು | ನೋಡಿದೇನೆ ಪ್ರೌಢ ಸುಂದರೀ ||ಪ|| ರೂಢಮಾಗಿ ಮೂರು ನದಿಯು | ಕೂಡಿಯಿರುವ ಠಾವಿನಲ್ಲಿ | ಆಡಿ ಬಂದು ಜೋಡು ಗಿಳಿಯು | ಕೂಡಿ ಮಾತಾಡುವದನು || ನೋಡಿದೇನೆ|| ||ಅ|| ವುರಿವ ಗಿರಿಯ ತುದಿಯ ಮೆರದು | ಸುರಿವ ಸುಧೆಯ ಭರದಿ ಸವಿದು | ಗುರುತನರಿತು ಶರಿರ ಮರತು | ಹರಿಹರ ಗುರುವರನ ಬೆರÉತು || ನೋಡಿದೇನೆ ||3|| (ಹರಿಹರಗುರು) ಮುಟ್ಟು ಮುಟ್ಟೆನ್ನುತ ಮುಟ್ಟು ಮುಟ್ಟೆನ್ನುತ ಮೂರ್ನಾರು ಹೊರಳುವೆ ಮುಟ್ಟೆಲ್ಲಿ ಬಂತೆ ಬಿಕನಾಶಿ ||ಪ|| ಮುಟ್ಟೋ ನೀನೇ ಮಡಿಯೂ ನೀನೇ ಕೆಟ್ಟಿತು ನಿನ ಮಡಿ ಬಿಕನಾಶಿ ||ಮುಟ್ಟು|| ||ಅಪ|| (ಚಿದಾನಂದಾವಧೂತ) ಕುಣಿಯುತ್ತಲಿರುವಂಥ ನವಿಲೇ ಕುಣಿಯುತ್ತಲಿರುವಂಥ ನವಿಲೇ | ನಿನ್ನ | ಕುಣಿತಕ್ಕೆ ಸಾಲದು ಬ್ರಹ್ಮಾಂಡ ಬಯಲೇ ||ಕುಣಿಯುತ್ತಲಿರುವಂಥ|| ||ಪ|| ದಣಿವಿಲ್ಲದೊಲು ಕುಣಿವ ಲೀಲೆ | ನೋಡಿ | ಮಣಿದಿತ್ತು ಜಗವೆಲ್ಲ ಬೆರಗಾದ ಮೇಲೆ ||ಕುಣಿಯುತ್ತಲಿರುವಂಥ|| ||ಅ.ಪ|| (ತುರುವನೂರು ಲಿಂಗಾರ್ಯ)

Related Books