ಕನ್ನಡದ ಸಂಸ್ಕೃತಿ ಚಿಂತಕರಲ್ಲಿ ಒಬ್ಬರಾದ ನಟರಾಜ ಬೂದಾಳು ಅವರು ಬೌದ್ಧ ಚಿಂತನೆಗಳ ಅಧ್ಯಯನದಲ್ಲಿ ಹೆಸರು ಮಾಡಿದವರು. ಈ ನಿಟ್ಟಿನಲ್ಲಿ ಹಲವಾರು ಕೃತಿಗಳನ್ನು ಅವರು ಪ್ರಕಟಿಸಿದ್ದಾರೆ. ಆ ಸಾಲಿಗೆ ಸೇರುವ ಮತ್ತೊಂದು ಕೃತಿ ’ಬೌದ್ಧ ಧರ್ಮದ ರಾಜನೀತಿ. ಇದು ಕವಿ ನಾಗಾರ್ಜುನನ ರಾಜಪರಿಕಥಾ ರತ್ನಾವಳಿ ಕೃತಿಯ ಸಂಗ್ರಹಾನುವಾದ. ಬೌದ್ಧತತ್ವದ ನಿಜವಾದ ವ್ಯಾಖ್ಯಾನವನ್ನು ಕಟ್ಟಿಕೊಟ್ಟವನಾದ ನಾಗರ್ಜುನ ಅತಿ ಮಹತ್ವದ ತತ್ವಜ್ಞಾನಿಗಳಲ್ಲಿ ಒಬ್ಬ. ಬುದ್ಧನ ನಿರ್ವಾಣವಾಗಿ ಆರುನೂರು ವರ್ಷಗಳ ಬಳಿಕ ಆತನ ಚಿಂತನೆಗಳ ವ್ಯಾಖ್ಯಾನಕ್ಕೆ ನಿಂತ ನಾಗಾರ್ಜುನ, ಆವರೆಗಿನ ತಪ್ಪು ತಿಳುವಳಿಕೆಗಳನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾನೆ. ಈ ನಿಟ್ಟಿನಲ್ಲಿನ ಒಂದು ಮಹತ್ವದ ಕೃತಿಯಾಗಿರುವ ರಾಜಪರಿಕಥಾ ರತ್ನಾವಳಿಯನ್ನು ಬೂದಾಳು ಅವರು ಕನ್ನಡದಲ್ಲಿ ಸಂಗ್ರಹಿಸಿ ಕೊಟ್ಟಿದ್ದಾರೆ.
©2024 Book Brahma Private Limited.