1947 ರಿಂದ 1962 ಅಕ್ಟೋಬರ್ 19 ರವರೆಗಿನ ಭಾರತ-ಚೈನಾ ಗಡಿವಿವಾದಗಳ ತಾರ್ಕಿಕ ಬೆಳವಣಿಗೆಗಳು ಕುರಿತ ಮಾಹಿತಿಯನ್ನು ಲೇಖಕ ಯಡೂರು ಮಹಾಬಲ ಅವರು ದಾಖಲಿಸಿದ್ದಾರೆ.
ಯುದ್ಧ ಘೋಷಣೆಗೂ ಮುನ್ನ ಅಂದಿನ ಪ್ರಧಾನಿ ನೆಹರು ಪತ್ರಕರ್ತರೊಂದಿಗೆ ಮಾತನಾಡಿ, ’ಯುದ್ಧ ಆರಂಭದ ದಿನ ನಿಗದಿ ವಿಷಯ ಸೈನ್ಯಕ್ಕೆ ಬಿಟ್ಟಿದ್ದು’ (ಅ.13 ರಂದು) ಎಂದು ಹೇಳಿದ್ದರು. ಆದರೆ, ಮರುದಿನ ಪತ್ರಿಕೆಗಳು ’ನೆಹರು ಅವರು’ಯುದ್ಧವನ್ನೇ ಘೋಷಿಸಿದರು” ಎಂದು ಪ್ರಕಟಿಸಿದ್ದವು. ಇದರ ಪರಿಣಾಮ ಚೀನಾ ಪ್ರತಿಕ್ರಿಯಿಸಿ ’ ಪ್ರಪಾತದ ಅಂಚಿನಿಂದ ಹಿಂದೆ ಸರಿ, ನಿನ್ನ ಜೂಜಾಟಕ್ಕೆ ಭಾರತೀಯ ಸೈನಿಕರ ಜೀವಗಳನ್ನು ಪಣವಾಗಿ ಉಪಯೋಗಿಸಬೇಡ’ ಎಂದು ಕೆಣಕಿತ್ತು. ಇಂತಹ ಸಂಗತಿಗಳ ದಾಖಲೀಕರಣವೇ ಈ ಕೃತಿ.
©2024 Book Brahma Private Limited.