ಪ್ಯಾಲೇಸ್ತೀನ್ ಸಂಕಟಗಳನ್ನ ಈ ಕೃತಿ ಪರಿಚಯಿಸುತ್ತದೆ. ಜಾಗತಿಕ ರಾಜಕಾರಣದ ಬಲಿಪಶುವಾಗಿರುವ ಪ್ಯಾಲೇಸ್ತೀನ್ ನೆಲದ ಇತಿಹಾಸ, ವರ್ತಮಾನ ಮತ್ತು ಭವಿಷ್ಯವನ್ನು ಅತ್ಯಂತ ಸರಳವಾಗಿ, ಸಂಕ್ಷಿಪ್ತವಾಗಿ ಕಟ್ಟಿಕೊಡುತ್ತದೆ. ಪ್ಯಾಲೇಸ್ತೀನ್ನ ಇಂದಿನ ಸ್ಥಿತಿಗತಿ, ಅದಕ್ಕೆ ಕಾರಣವಾದ ಚಾರಿತ್ರಿಕ ಹಿನ್ನೆಲೆ, ಗಾಝಾ ನರಮೇಧ, ಪ್ಯಾಲೇಸ್ತೀನ್ ಜೊತೆಗಿನ ಭಾರತದ ಸಂಬಂಧ, ಪ್ಯಾಲೇಸ್ತೀನ್ ಕುರಿತಂತೆ ಜಗತ್ತಿನ ದ್ವಂದ್ವ ನಿಲುವುಗಳ ಬಗ್ಗೆ ಈ ಕೃತಿಯೂ ನಮಗೆ ವಿವರಗಳನ್ನು ನೀಡುತ್ತದೆ. ಜಗತ್ತಿನ ಭಯೋತ್ಪಾದನೆ, ಅದಕ್ಕೆ ಕಾರಣವಾದ ಇತರ ಸಂಗತಿಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕಾದರೆ ಫೆಲೆಸ್ತೀನನ್ನು ಅರ್ಥ ಮಾಡಿಕೊಳ್ಳಬೇಕು. ಅವರ ಸಂಕಟಗಳನ್ನು ಅರ್ಥ ಮಾಡಿಕೊಳ್ಳಬೇಕು. ಅದನ್ನು ಈ ಕೃತಿ ಅರ್ಥ ಮಾಡಿಸುತ್ತದೆ.
©2025 Book Brahma Private Limited.