ಲೇಖಕ ಪರಂಜ್ಯೋತಿ (ಕೆ.ಪಿ. ಸ್ವಾಮಿ) ಅವರ ಕೃತಿ-ವಿಶ್ವವಿಖ್ಯಾತ ಮಾನವ ನಿರ್ಮಿತ ಅದ್ಭುತಗಳು. ಮನುಷ್ಯನಲ್ಲಿ ಮಹತ್ವಾಕಾಂಕ್ಷೆ ಬಹಳ. ಅಂತಹ ಮನುಷ್ಯರೇ ಅಸಾಧ್ಯವಾದದ್ದನ್ನು ಸಾಧಿಸುತ್ತಾರೆ. ಮಾನವ ನಿರ್ಮಿತ ಗುಡಿ-ಗೋಪುರಗಳು, ಕೋಟೆ-ಕೊತ್ತಳಗಳು, ಭವ್ಯ ಸೌಧಗಳು, ಅಣೆಕಟ್ಟುಗಳು, ಜಲಮಾರ್ಗಗಳು ಇವಕ್ಕೆ ಜೀವಂತ ಉದಾಹರಣೆಗಳೂ. ಪಿರಮಿಡ್‌ಗಳಿಂದ ಹಿಡಿದು ಇಂದಿನ ಗಗನಚುಂಬಿಗಳವರೆಗೆ ಮಾನವನಿರ್ಮಿತ ಅದ್ಭುತ ರಚನೆಗಳೇ ಆಗಿವೆ. ಹಿಂದಿನ ಕಾಲದಲ್ಲಿ ತಂತ್ರಜ್ಞಾನ ಇಂದಿನಷ್ಟು ಮುಂದುವರಿದಿರಲಿಲ್ಲ; ಈಗ ಲಭ್ಯವಿರುವ ಆಧುನಿಕ ಪರಿಕರಗಳೂ ಆಗ ಇರಲಿಲ್ಲ. ಆದರೂ ಅಂದಿನ ಕೆಲವು ರಚನೆಗಳು ನಮ್ಮನ್ನು ಬೆರಗುಗೊಳಿಸುತ್ತವೆ. ಅವುಗಳ ನಿರ್ಮಾಣದ ಉದ್ದೇಶ ಇಂದಿನ ಕಾಲಕ್ಕೆ ಅಪ್ರಸ್ತುತವೆನ್ನಿಸಿಬಹುದಾದರೂ, ಅವು ಅಂದಿನ ಮನುಷ್ಯರ ಮಿದುಳಿನ ಶ್ರಮದ ಫಲಗಳಾಗಿವೆ. ಹಿಂದಿನ ಪಿರಮಿಡ್‌ಗಳಿಂದ ಇಂದಿನ ಅನೇಕ ಆಧುನಿಕ ಪ್ರಯೋಜನಗಳವರೆಗೆ, ಪುರಾತನ ಚೀಣಿ ಗೋಡೆಯಿಂದ ಇಂದಿನ ಕ್ರೀಡಾಂಗಣಗಳವರೆಗೆ ಮಾನವ ನಿರ್ಮಿಸಿದ ಅದ್ಭುತ ರಚನೆಗಳ ಬಗೆಗೆ ವಿಸ್ಮಯಕಾರಿ ವಿವರಗಳನ್ನು ನೀಡಿದ್ದು ಈ ಕೃತಿಯ ವೈಶಿಷ್ಟ್ಯ. .
©2024 Book Brahma Private Limited.