ಲೇಖಕ ಡಿ.ಎಸ್. ಲಿಂಗರಾಜು ಅವರ ಕೃತಿ-ಜಗತ್ತಿನ ಮಹಾನ್ ನಾಗರಿಕತೆಗಳು. ಸಿಂಧೂ ನಾಗರಿಕತೆ, ಹರಪ್ಪ ಮಹೆಂಜದಾರೊ ನಾಗರಿಕತೆ ಸೇರಿದಂತೆ ಜಗತ್ತಿನ ನಾಗರಿಕತೆಗಳು ಇತಿಹಾಸದಲ್ಲಿ ಮಹತ್ವದ ಮೈಲುಗಲ್ಲುಗಳಾಗಿವೆ. ಇಂತಹ ನಾಗರಿಕತೆಯ ಬೆಳಕಿನಲ್ಲೇ ಸಂಸ್ಕೃತಿಗಳು ಬೆಳಗಿವೆ. ಇತಿಹಾಸ, ಸಾಮಾಜಿಕತೆಗಳ ಅಧ್ಯಯನಗಳಾಗಿವೆ. ಇತಿಹಾಸವನ್ನು ಅರಿಯಲು ಹಾಗೂ ವರ್ತಮಾನದೊಂದಿಗೆ ಭವಿಷ್ಯದುದ್ದಕ್ಕೂ ತಮ್ಮತನವನ್ನು ಉಳಿಸಿಕೊಂಡು ಬರಲು ಈ ನಾಗರಿಕತೆಗಳು ಸಹಾಯಕವಾಗುತ್ತವೆ. ಈ ಹಿನ್ನೆಲೆಯಲ್ಲಿ, ಜಗತ್ತಿನ ಮಹಾನ್ ನಾಗರಿಕತೆಗಳ ಪರಿಚಯದ ಅಗತ್ಯ ಹಾಗೂ ಅನಿವಾರ್ಯ. ಸಾಮಾನ್ಯ ಆಸಕ್ತರಿಗೂ ಇತಿಹಾಸದ ವಿದ್ಯಾರ್ಥಿ-ಶಿಕ್ಷಕರಿಗೂ ತುಂಬಾ ಉಪಯುಕ್ತವಾದ ಕೃತಿ ಇದು.
ಹೊಸದಿಗಂತಗಳ ಹುಡುಕಾಟದಲ್ಲಿ ಆದಿಮಾನವನ ವಲಸೆ, ಅಟ್ಲಾಂಟಿಸ್ ಕಥಾನಕ, ನಾಗರಿಕತೆಗಳ ತೊಟ್ಟಿಲು -ಮೆಸಪೋಟೆಮಿಯ, ಈಜಿಪ್ತ್ ಎಂಬ ಮಾಯಾಲೋಕ, ನೋಕ್ ನಾಗರಿಕತೆ, ಆಸ್ಟ್ರೇಲಿಯನ್ ಬುಕ್ ಮ್ಯಾನ್ ಕಥನಗೀತೆ, ಪೇರುವಿನ ಸಾನ್ನಿಧ್ಯದಲ್ಲಿ ಹಾಗೂ ಸಾವಿರದ ನದಿಯ ನಿಗೂಢ ರಹಸ್ಯ ಹೀಗೆ ವಿವಿಧ ಆದ್ಯಾಯಗಳನ್ನು ಈ ಕೃತಿಯು ಒಳಗೊಂಡಿದ್ದು, ಜಗತ್ತಿನ ರಹಸ್ಯಮಯ ನಾಗರಿಕತೆಗಳ ಹಾಗೂ ನಿಗೂಢತೆಗಳನ್ನು ಅನಾವರಣಗೊಳಿಸುತ್ತದೆ.
©2024 Book Brahma Private Limited.