ಜಗವ ನಡುಗಿಸಿದ ಆ ಹತ್ತು ದಿನ

Author : ಬಿ.ಆರ್‌. ಮಂಜುನಾಥ್‌

Pages 230

₹ 200.00

Buy Now


Year of Publication: 2018
Published by: ನವಕರ್ನಾಟಕ ಪ್ರಕಾಶನ
Address: 101, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಕುಮಾರ ಪಾರ್ಕ್ ಪೂರ್ವ, ಬೆಂಗಳೂರು-560001
Phone: 7353530805 / 080 - 20161913

Synopsys

ಝಾರ್ ಚಕ್ರವರ್ತಿಯ ದಬ್ಬಾಳಿಕೆಯಿಂದ ರೋಸಿ ಹೋದ ಜನತೆ ಬೋಲೈವಿಕ್ ನಾಯಕ ಲೆನಿನ್ ನೇತೃತ್ವದಲ್ಲಿ ಒಗ್ಗೂಡಿ ಹೋರಾಟದ ಮಾರ್ಗ ಹಿಡಿದು ಸಶಸ್ತ್ರ ದಂಗೆಯ ಮೂಲಕ ಹೊಸತೊಂದು ಆಡಳಿತವನ್ನು ಸೋವಿಯತ್‌ಗೆ ನೀಡಿದ ದಿನ. ಬಂಡವಾಳಶಾಹಿ ವ್ಯವಸ್ಥೆ ನಡುಗಿ ನಿಂತ ಸಂದರ್ಭ ಅದು. ಆ ಹೋರಾಟದ ಹಿನ್ನೆಲೆ ಮತ್ತು ಕೊನೆಯ ಹತ್ತು ದಿನಗಳ ಘಟನಾವಳಿಗಳನ್ನು “ಜಗವ ನಡುಗಿಸಿದ ಆ ಹತ್ತು ದಿನ' ಕೃತಿಯಲ್ಲಿ ನೀಡಲಾಗಿದೆ. ಜಾನ್ ರೀಡ್ ಬರೆದಿರುವ ಕೃತಿಯನ್ನು ಡಾ. ಬಿ. ಆರ್. ಮಂಜುನಾಥ್ ಅವರು ಕನ್ನಡಕ್ಕೆ ರೂಪಾಂತರಿಸಿದ್ದಾರೆ. ಜಾನ್ ರೀಡ್ ಎಂಬ ಅಮೆರಿಕನ್ ಪತ್ರಕರ್ತ ಅಲ್ಲಿ ನಡೆದ ವಿದ್ಯಮಾನಗಳನ್ನು ಕಣ್ಣಾರೆ ಕಂಡು ತನ್ನ ‘ಟೆನ್ ಡೇಸ್ ದಟ್ ಶುಕ್ ದ ವರ್ಲ್ಡ್' ಕೃತಿಯಲ್ಲಿ ಅಕ್ಷರ ರೂಪಕ್ಕಿಳಿಸಿದ್ದಾರೆ. ಅದರ ಸಂಕ್ಷಿಪ್ತ ರೂಪಾಂತರ ಈ ಕೃತಿ.

About the Author

ಬಿ.ಆರ್‌. ಮಂಜುನಾಥ್‌
(21 December 1940)

ಲೇಖಕ ಬಿ. ಆರ್‌. ಮಂಜುನಾಥ್ ಅವರು ತುರ್ತುಪರಿಸ್ಥಿತಿಯ ನಂತರದ ದಿನಗಳಲ್ಲಿ ಎಡಪಂಥೀಯ ವಿದ್ಯಾರ್ಥಿ ಚಳುವಳಿಗೆ, ಸಾಂಸ್ಕೃತಿಕ ಆಂದೋಲನಕ್ಕೆ ಧುಮುಕಿದವರು. ಜಾನ್ ರೀಡ್ ಅವರ 'ಟೆನ್ ಡೇಸ್ ದಟ್ ಶುಕ್ ದ ವರ್ಲ್‌, ಸಮಾಜವಾದಿ ವೈದ್ಯಕೀಯದ ಕುರಿತಾದ 'ರೆಡ್ ಮೆಡಿಸಿನ್', ಇ.ಎಚ್.ಕಾರ್‌ ಅವರ 'ವಾಟ್ ಈಸ್ ಹಿಸ್ಟರಿ' ಅವರ ಅನುವಾದಿತ ಕೃತಿಗಳಲ್ಲಿ ಕೆಲವು. ವಿವಿಧ ಸಾಂಸ್ಕೃತಿಕ, ವಿದ್ಯಾರ್ಥಿ-ಯುವಜನ ಪತ್ರಿಕೆಗಳ ಸಂಪಾದಕರಾಗಿದ್ದ ಅವರು ಭಗತ್ ಸಿಂಗ್‌ರ ಕುರಿತು ಪುಸ್ತಕಗಳನ್ನು ಬರೆದಿರುವುದಲ್ಲದೆ ಅನೇಕ ನಾಟಕ, ಬೀದಿ ನಾಟಕಗಳನ್ನು ಸಹ ರಚಿಸಿ ಆಡಿಸಿದ್ದಾರೆ. ಪ್ರಸ್ತುತ ಸಮಕಾಲೀನ ಸಾಮಾಜಿಕ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾಗಿದ್ದು ವಿವಿಧ ಜನಪರ ಆಂದೋಲನಗಳಲ್ಲಿ ...

READ MORE

Related Books