‘ವಾತ್ಸಾಯನ ಕಾಮಸೂತ್ರ’ ಎಂಬುದು ಲೇಖಕ ಜಿ.ಎಂ. ಕೃಷ್ಣಮೂರ್ತಿ ಅವರ ಕೃತಿ. ಲೈಂಗಿಕತೆ ಎನ್ನುವುದು ಒಂದು ಕಲೆ. ಭಾರತದ ಪ್ರಾಚೀನ ಪರಂಪರೆಯಿಂದಲೂ ಲೈಂಗಿಕತೆಯನ್ನು ವಿಜ್ಞಾನವೆಂದೇ ಭಾವಿಸಿ, ಅದು ಮನೋದೈಹಿಕ ಆರೋಗ್ಯದ ಸ್ವಾಸ್ಥ್ಯ ಕಾಯ್ದುಕೊಳ್ಳುವಲ್ಲಿ ಮಹತ್ವದ ಪಾತ್ರವಹಿಸುತ್ತದೆ .ಈ ಕುರಿತು ಜನಸಮೂಹದಲ್ಲಿ ಜಾಗೃತಿ ಮೂಡಿಸಲು ಲೈಂಗಿಕತೆಗೆ ದೈವದ ಸ್ಥಾನವನ್ನೂ ನೀಡಲಾಯಿತು. ದೇವಾಲಯಗಳಲ್ಲೂ ಈ ಕಲೆಯನ್ನು ಪ್ರಚುರ ಪಡಿಸುವ ಹಿನ್ನೆಲೆಯಲ್ಲಿ ಲೈಂಗಿಕ ಶಿಲ್ಪಗಳನ್ನು ಕೆತ್ತಿಸಲಾಯಿತು. ಹೆಸರೇ ಹೇಳುವಂತೆ ಕಾಮದ ಸೂತ್ರವನ್ನು ಒಳಗೊಂಡ ಕೃತಿ ಇದು. ಪರಸ್ಪರ ಹೆಣ್ಣು-ಗಂಡು ಸುಖಕರ ಬದುಕು ನಡೆಸಬೇಕೆಂಬ ಉದ್ದೇಶವು ಈ ಸೂತ್ರಗಳಲ್ಲಿದೆ. ಈ ಕುರಿತು ವಿವರಗಳಿರುವ ಕೃತಿ ಇದು.
©2024 Book Brahma Private Limited.