ಜಗತ್ತಿಗೆ ಕಾಮಶಾಸ್ತ್ರದ ಅರಿವನ್ನು, ಸಹಜತೆ ಎಂಬುದನ್ನು ತೋರಿಸಿಕೊಟ್ಟ ನಮ್ಮ ನಾಡಿನಲ್ಲಿ, ಇಂದು ಲೈಂಗಿಕತೆ ಬಗ್ಗೆ ಅಜ್ಞಾನ ತಾಂಡವವಾಡುತ್ತಿದೆ. ಲೈಂಗಿಕ ಸಂಪರ್ಕದಲ್ಲಿ ದಂಪತಿ ಪಾಲಿಸಬೇಕಾದ ಸ್ವಚ್ಛತೆಯ ಬಗ್ಗೆ ಅವರ ಅರಿವು ತೀರಾ ಕಡಿಮೆ.
ಜನನಾಂಗಗಳು ಹಾಗೂ ಅವುಗಳೊಡನೆ ನಿಕಟವಾಗಿರುವ ವಿಸರ್ಜನಾಂಗಗಳ ರಚನೆ ಹಾಗೂ ಕಾರ್ಯದ ಬಗ್ಗೆ ಸರಿಯಾಗಿ ತಿಳಿದಿರುವುದಕ್ಕಿಂತ ತಪ್ಪಾಗಿ ತಿಳಿದಿರುವುದರ ಹಲವು ಸಂಗತಿಗಳ ಕುರಿತು ಈ ಕೃತಿ ಮಾತನಾಡುತ್ತದೆ. ದಂಪತಿ ನಡುವೆ ಲೈಂಗಿಕತೆ ಬಗ್ಗೆ ಇರುವ ಅಜ್ಞಾನದಿಂದ ಮನಸ್ತಾಪ, ಗೊಂದಲ, ವಿರಸ ಉಂಟಾಗುವುದನ್ನು ತಡೆಯಲು ಇಲ್ಲಿ ಸೂಕ್ತ ಸಲಹೆ ನೀಡಲಾಗಿದೆ. ಲೈಂಗಿಕ ಚಟುವಟಿಕೆಗಳು ದಾಂಪತ್ಯದಲ್ಲಿ ಇಬ್ಬರ ಆರೋಗ್ಯಕ್ಕೆ ಪೂರಕವಾಗಿರಬೇಕೇ ಹೊರತು ಮಾರಕವಾಗಿರಬಾರದು ಎಂಬುದನ್ನು ವಿವರವಾಗಿ ತಿಳಿಸಿದ್ದಾರೆ ಲೇಖಕರು.
ದಂಪತಿ ಮುಖ್ಯವಾಗಿ ಜನನಾಂಗ ಸ್ವಚ್ಛತೆ ಹಾಗೂ ಆಸನ ಸ್ವಚ್ಛತೆಯನ್ನು ಹೇಗೆ ಪಾಲಿಸಬೇಕು. ಆಗ ಅವರ ಲೈಂಗಿಕ ಬದುಕು ಮಾತ್ರವಲ್ಲ, ಸಮಗ್ರ ಆರೋಗ್ಯವನ್ನು ಹೇಗೆ ತೃಪ್ತಿಕರವಾಗಿಸಿಕೊಳ್ಳಬೇಕು ಎಂಬುದನ್ನು ಲೇಖಕ ಡಾ. ನಾ. ಸೋಮೇಶ್ವರ ತಿಳಿಸಿದ್ದಾರೆ.
©2025 Book Brahma Private Limited.