ಮಾನವನ ದೈಹಿಕ ಹಸಿವುಗಳಲ್ಲಿ ಲೈಂಗಿಕತೆ ಒಂದು. ಅದರ ಬಗ್ಗೆ ಕೀಳರಿಮೆ ತಾಳುವುದು ಸಲ್ಲದು. ಆರೋಗ್ಯಕರವಾಗಿ ಲೈಂಗಿಕತೆಯನ್ನು ಬಳಸಲು ಸಮರ್ಥರಾದರೆ ಅವರು ಆರೋಗ್ಯಕರ ಹಾಗೂ ನೆಮ್ಮದಿಯ ಕೌಟುಂಬಿಕ ಜೀವನ ನಡೆಸಲು ಸಾಧ್ಯವಾಗುತ್ತದೆ. ಇಂತಹ ವಿಚಾರಗಳ ಲೇಖನಗಳ ಸಂಗ್ರಹವೇ -ಲೈಂಗಿಕ ಆರೋಗ್ಯ. ಡಾ. ಪದ್ಮಿನಿ ಪ್ರಸಾದ ಅವರು ರಚಿಸಿದ್ದು, ಮನೋವೈಜ್ಞಾನಿಕತೆಯ ಹಿನ್ನೆಲೆಯಲ್ಲಿ ಅತ್ಯುತ್ತಮವಾಗಿ ವಿಶ್ಲೇಷಣೆ ಮಾಡಿರುವುದಕ್ಕಾಗಿ ಈ ಕೃತಿಗೆ ಡಾ. ಪಿ.ಎಸ್.ಶಂಕರ್ ಪ್ರತಿಷ್ಠಾನದ ‘ಶ್ರೇಷ್ಠ ವೈದ್ಯಸಾಹಿತ್ಯ ಪ್ರಶಸ್ತಿ’( 2003-04) ಲಭಿಸಿದೆ.
ಹೊಸತು- ನವೆಂಬರ್ -2003
ಡಾ|| ಪದ್ಮನಿ ಪ್ರಸಾದ್ ಹಿರಿಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಮಾತ್ರವೇ ಅಲ್ಲದೆ ಲೈಂಗಿಕ ಮತ್ತು ವೈವಾಹಿಕ ಸಲಹಾ ಆರೋಗ್ಯ ತಜ್ಞರೂ ಆಗಿದ್ದಾರೆ. ನಮ್ಮ ಶಾಲಾ ಕಾಲೇಜುಗಳಲ್ಲಿ ಲೈಂಗಿಕ ಶಿಕ್ಷಣದ ಅವಶ್ಯಕತೆ ಇದೆಯೇ ಎಂಬುದು ಇನ್ನೂ ಚರ್ಚೆಯ ಹಂತದಲ್ಲೇ ಇದೆ. ಪತ್ರಿಕೆಗಳ ಹಾಗೂ ದೂರದರ್ಶನದ ವಿವಿಧ ವಾಹಿನಿಗಳ ಮೂಲಕ ಇವರು ಜನರಲ್ಲಿ ಲೈಂಗಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಯುವಜನರು ಅತ್ಯಂತ ಮುಜುಗರ ಸಂಕೋಚಗಳಿಂದ ನೋಡುತ್ತಿರುವ ಒ೦ದು ವೈದ್ಯಕೀಯ ಅಧ್ಯಾಯವೇ ಆಗಿರುವ ಈ ಬಗ್ಗೆ ಲೇಖನಗಳಿವೆ.
©2024 Book Brahma Private Limited.