ಲೈಂಗಿಕಾಭಿವ್ಯಕ್ತಿಯು ಮನುಷ್ಯನಿಗೆ ನಿದ್ರೆಯಷ್ಟೆ ಸಹಜ. ಆದರೂ, ಸಾಮಾಜಿಕ ನಿಯಮಗಳು ಈ ಬಗ್ಗೆ ಹೆಚ್ಚು ಚರ್ಚೆಯಾಗದಂತೆ ತಡೆಯೊಡ್ಡಿವೆ. ಯುವ ಪೀಳಿಗೆ ಲೈಂಗಿಕತೆ ಬಗ್ಗೆ ಮುಕ್ತವಾಗಿ ಆಲೋಚಿಸುವ, ತಮ್ಮೊಳಗಿನ ಸಮಸ್ಯೆಗಳನ್ನು ಕುರಿತು ವೈದ್ಯರೊಟ್ಟಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವಲ್ಲಿ ಸ್ವಲ್ಪ ಸ್ವತಂತ್ರ ಭಾವನೆ ತೋರುತ್ತಿರುವುದು ಆರೋಗ್ಯ ಪೂರ್ಣ ಬೆಳವಣಿಗೆ. ಓದುಗರಿಂದ ತಮಗೆ ಬಂದ ಲೈಂಗಿಕ ಸಮಸ್ಯೆಗಳಿಗೆ ಡಾ.ಪದ್ಮಿನಿ ಪ್ರಸಾದ್ ಸಲಹಾ ರೂಪದಲ್ಲಿ ನೀಡಿದ ಪರಿಹಾರಗಳ ಸಂಕಲನವಿದು. ಹದಿಹರೆಯದ ಸಮಸ್ಯೆ, ವಿವಾಹ ಪೂರ್ವದ ಹಾಗೂ ನಂತರದ ಸಮಸ್ಯೆಗಳು, ಪುರುಷರ ಸಮಸ್ಯೆಗಳು ಹಾಗೂ ಪರಿಹಾರ ಇತ್ಯಾದಿ ವಿಷಯಗಳನ್ನು ಕೃತಿ ಒಳಗೊಂಡಿದೆ.
©2025 Book Brahma Private Limited.